ADVERTISEMENT

ಮಹಾರಾಷ್ಟ್ರ: ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಎನ್‌ಸಿಪಿ ಮಾಜಿ ಸಂಸದರ ಹೆಸರು

ಪಿಟಿಐ
Published 8 ಮೇ 2020, 20:40 IST
Last Updated 8 ಮೇ 2020, 20:40 IST

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್‌ಗೆ ಮೇ 21ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಎನ್‌ಸಿಪಿ ಮಾಜಿ ಸಂಸದ ರಣಜಿತ್‌ಸಿನ್ಹಾ ಮೋಹಿತೆ ಪಾಟೀಲ್‌ ಮತ್ತು ಇತರ ಮೂವರ ಹೆಸರು ಸೇರಿದೆ.

ಶುಕ್ರವಾರ ದೆಹಲಿಯಲ್ಲಿ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಬಿಜೆಪಿಯ ಹಿರಿಯ ನಾಯಕರಾದ ಏಕನಾಥ್‌ ಖಡ್ಸೆ ಮತ್ತು ಪಂಕಜ್‌ ಮುಂಡೆ ಅವರ ಹೆಸರುಗಳು ಈ ಪಟ್ಟಿಯಲ್ಲಿ ಇಲ್ಲ. 2019ರ ಲೋಕಸಭೆ ಚುನಾವಣೆಗೆ ಮುನ್ನ ರಣಜಿತ್‌ ಸಿನ್ಹಾ ಮೋಹಿತೆ ಪಾಟೀಲ್‌ ಬಿಜೆಪಿ ಸೇರಿದ್ದರು.

ಇವರು ಮಹಾರಾಷ್ಟ್ರದ ಮಾಜಿ ಉಪಮುಖ್ಯಮಂತ್ರಿ ವಿಜಯಸಿನ್ಹಾ ಪಾಟೀಲ್‌ ಅವರ ಪುತ್ರರು. ಆದರೆ, ಇದುವರೆಗೆ ವಿಜಯ ಸಿನ್ಹಾ ಅಧಿಕೃತವಾಗಿ ಬಿಜೆಪಿ ಸೇರಿಲ್ಲ. ಪರಿಷತ್‌ನ ಒಂಬತ್ತು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮಹಾರಾಷ್ಟ್ರ ವಿಧಾನಸಭೆಯ 288 ಸದಸ್ಯರು ಪರಿಷತ್‌ ಸದಸ್ಯರನ್ನು ಆಯ್ಕೆ ಮಾಡ ಲಿದ್ದಾರೆ. ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸಹ ಅಭ್ಯರ್ಥಿಯಾಗಿರುವುದರಿಂದ ಈ ಚುನಾವಣೆ ಮಹತ್ವ ಪಡೆದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.