ADVERTISEMENT

ಎಸ್‌ಎಸ್‌ಎಲ್‌ಸಿ: ಅಮ್ಮ–ಮಗ ಇಬ್ಬರೂ ಫಸ್ಟ್‌ಕ್ಲಾಸ್‌ನಲ್ಲಿ ಪಾಸ್‌!

ಪಿಟಿಐ
Published 1 ಆಗಸ್ಟ್ 2020, 9:38 IST
Last Updated 1 ಆಗಸ್ಟ್ 2020, 9:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪುಣೆ: ಸಾಮಾನ್ಯವಾಗಿ ಪೋಷಕರು ಮಕ್ಕಳಿಗೆ ‘ಚೆನ್ನಾಗಿ ಓದಬೇಕಪ್ಪಾ. ಪರೀಕ್ಷೆಯಲ್ಲಿ ಚೆನ್ನಾಗಿ ಮಾರ್ಕ್ಸ್‌ ತೆಗೀಬೇಕು‘ ಎಂದು ಹೇಳುತ್ತಾರೆ. ಆದರೆ ಇಲ್ಲೊಬ್ಬ ತಾಯಿ, ತನ್ನ ಮಗನೊಂದಿಗೆ ಹತ್ತನೇ ತರಗತಿ ಪರೀಕ್ಷೆ ಬರೆದು, ಫಸ್ಟ್‌ಕ್ಲಾಸ್‌ನಲ್ಲಿ ಪಾಸ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಬಾರಾಮತಿಯಲ್ಲಿ. ಇಲ್ಲಿನ ನಿವಾಸಿ ಬೇಬಿ ಗೌರವ್‌(36), ತನ್ನ 16ನೇ ವಯಸ್ಸಿನ ಮಗನೊಂದಿಗೆ ಹತ್ತನೇ ತರಗತಿ ಪರೀಕ್ಷೆ ಬರೆದು ಶೇ 64.10 ರಷ್ಟು ಅಂಕಪಡೆದು ಪಾಸು ಮಾಡಿದ್ದಾರೆ. ಮಗ ಶೇ 73.20ರಷ್ಟು ಅಂಕ ಪಡೆದಿದ್ದಾನೆ.

‘ಮದುವೆಯಿಂದಾಗಿ ನನ್ನ ವಿದ್ಯಾಭ್ಯಾಸ ಮೊಟಕಾಯಿತು. ಈಗ ನನ್ನ ಪತಿ ಓದುವುದಕ್ಕೆ ಉತ್ತೇಜನ ನೀಡಿದರು. ಹೀಗಾಗಿ ಮಗನ ಜತೆಯಲ್ಲಿ ಹತ್ತನೇ ತರಗತಿಯ ಪರೀಕ್ಷೆ ಬರೆದೆ‘ ಎಂದು ಖುಷಿಯಿಂದ ಹೇಳುತ್ತಾರೆ ಬೇಬಿ.

ADVERTISEMENT

ಪತಿ ಪ್ರದೀಪ್ ಗೌರವ್ ಮತ್ತು ಮಗ, ಈಕೆಯ ಪರೀಕ್ಷೆ ಬರೆಯಲು ಸಹಕಾರ ನೀಡಿದ್ದಾರೆ. ‘ನನ್ನ ಪತ್ನಿ ಮತ್ತು ಮಗ ಒಟ್ಟಿಗೆ ಪರೀಕ್ಷೆ ಬರೆದು, ಒಳ್ಳೆ ಅಂಕದೊಂದಿಗೆ ಪಾಸಾಗಿದ್ದಾರೆ. ಇಬ್ಬರ ಬಗ್ಗೆಯೂ ತುಂಬಾ ಹೆಮ್ಮೆ ಎನ್ನಿಸುತ್ತಿದೆ‘ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಪ್ರದೀಪ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.