ADVERTISEMENT

ಮುಂಬೈನಲ್ಲಿ ಭಾರಿ ಮಳೆ: ಗೋಡೆ ಕುಸಿದು 15 ಮಂದಿ ಸಾವು

ಏಜೆನ್ಸೀಸ್
Published 18 ಜುಲೈ 2021, 3:49 IST
Last Updated 18 ಜುಲೈ 2021, 3:49 IST
ಮುಂಬೈ ನಗರದ ರೈಲು ನಿಲ್ದಾಣ ಮಳೆ ನೀರಿನಿಂದ ಜಲಾವೃತಗೊಂಡಿರುವ ದೃಶ್ಯ – ರಾಯಿಟರ್ಸ್‌ ಚಿತ್ರ.
ಮುಂಬೈ ನಗರದ ರೈಲು ನಿಲ್ದಾಣ ಮಳೆ ನೀರಿನಿಂದ ಜಲಾವೃತಗೊಂಡಿರುವ ದೃಶ್ಯ – ರಾಯಿಟರ್ಸ್‌ ಚಿತ್ರ.    

ಮಹಾರಾಷ್ಟ್ರ: ಮುಂಬೈನಲ್ಲಿ ಶನಿವಾರ ತಡರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಚೆಂಬೂರಿನ ಭಾರತ್‌ ನಗರ ಪ್ರದೇಶದಲ್ಲಿ ಮನೆಯ ಗೋಡೆ ಕುಸಿದು 15 ಮಂದಿ ಮೃತಪಟ್ಟಿದ್ದಾರೆ.

ಅವಶೇಷಗಳ ಅಡಿಯಲ್ಲಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌) ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ.

ಭಾರಿ ಮಳೆಯಿಂದಾಗಿ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಹಲವೆಡೆ ಭೂಕುಸಿತ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.

ADVERTISEMENT

ಕೆರೆಯಂತಾಗಿರುವ ರಸ್ತೆಗಳು ಕಾರುಗಳು ಸೇರಿದಂತೆ ಹಲವು ವಾಹನಗಳು ತೇಲಿ ಹೋಗಿವೆ. ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗಿದ್ದು, ಲೋಕಲ್‌ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.