ADVERTISEMENT

ಮಹಾರಾಷ್ಟ್ರ: ಒಂದೇದಿನ 68,631 ಕೋವಿಡ್‌-19 ಹೊಸ ಪ್ರಕರಣ

ಏಜೆನ್ಸೀಸ್
Published 18 ಏಪ್ರಿಲ್ 2021, 16:09 IST
Last Updated 18 ಏಪ್ರಿಲ್ 2021, 16:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದಲ್ಲಿ ಕಳೆದ 24 ಅವಧಿಯಲ್ಲಿಬರೋಬ್ಬರಿ 68,631 ಕೋವಿಡ್‌-19 ಪ್ರಕರಣಗಳು ಹೊಸದಾಗಿ ದಾಖಲಾಗಿವೆ. ಇದೇವೇಳೆ 503 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಇದರೊಂದಿಗೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ6,70,388ಕ್ಕೆ ಏರಿಕೆಯಾಗಿದೆ.ಇಂದು ಗುಣಮುಖರಾದ45,654 ಮಂದಿಯೂ ಸೇರಿದಂತೆ ಇದುವರೆಗೆ31,06,828ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. 60,473ಜನರು ಮೃತಪಟ್ಟಿದ್ದಾರೆ.

ಅತಿಹೆಚ್ಚು ಹೊಸ ಪ್ರಕರಣಗಳು ವರದಿಯಾಗಿರುವುದುರಾಜಧಾನಿ ಮುಂಬೈ ಮತ್ತು ನಾಗಪುರದಲ್ಲಿ. ಮುಂಬೈನಲ್ಲಿ 8,479 ಜನರಿಗೆ ಇಂದು ಸೋಂಕು ದೃಢಪಟ್ಟಿದೆ. ಹಾಗೆಯೇ 53 ಸೋಂಕಿತರು ಮೃತಪಟ್ಟಿದ್ದಾರೆ. ಇನ್ನೂ87,698 ಸಕ್ರಿಯ ಪ್ರಕರಣಗಳಿದ್ದು, 12,347 ಮಂದಿ ಮೃತಪಟ್ಟಿದ್ದಾರೆ. ನಾಗಪುರದಲ್ಲಿ 7,107 ಹೊಸ ಪ್ರಕರಣಗಳು ಮತ್ತು 85 ಮಂದಿ ಮೃತಪಟ್ಟಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.