ಪಾಲ್ಘರ್: ‘ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬಾಲಕಿಯನ್ನು ವೇಶ್ಯಾವಾಟಿಕೆಗೆ ತೊಡಗಿಸಲು ಯತ್ನಿಸಿದ ಆರೋಪದಡಿ 35 ವರ್ಷದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.
‘ವಲಿವ್ ಪ್ರದೇಶದ ಬಾರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳು 16 ವರ್ಷದ ಬಾಲಕಿಯನ್ನು ₹4 ಲಕ್ಷಕ್ಕೆ ಮಾರಿ, ವೇಶ್ಯಾವಾಟಿಕೆಗೆ ತಳ್ಳಲು ಯೋಜನೆ ರೂಪಿಸಿದ್ದಾಳೆ ಎಂದು ಎನ್‌ಜಿಒವೊಂದು ಪೊಲೀಸರಿಗೆ ದೂರು ನೀಡಿತ್ತು’ ಎಂದು ಅವರು ಹೇಳಿದರು.
‘ಈ ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಲು ಜಾಲ ರೂಪಿಸಲಾಗಿತ್ತು. ಸೋಮವಾರವಸಾಯಿ ಬಳಿ ಆಕೆಯನ್ನು ಬಂಧಿಸಿ, ಬಾಲಕಿಯನ್ನು ರಕ್ಷಿಸಲಾಗಿದೆ. ಮಹಿಳೆ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.