ಪುಣೆ: ನಿರ್ಮಾಣ ಹಂತದ ಆಟದ ಮೈದಾನದಲ್ಲಿ ಭಗವಾನ್ ರಾಮನ 25 ಅಡಿ ಎತ್ತರದ ಪ್ರತಿಮೆ ಸ್ಥಾಪಿಸುವ ಸಂಬಂಧ ಪುಣೆ ನಗರ ಪಾಲಿಕೆ ನಿಲುವಳಿಗೆ ಅನುಮೋದನೆ ಪಡೆದಿದೆ ಎಂದು ಕಾರ್ಪೊರೇಟರ್ ವರ್ಷಾ ತಾಪ್ಕಿರ್ ತಿಳಿಸಿದ್ದಾರೆ.
ನಗರಪಾಲಿಕೆಯ ಸ್ಥಾಯಿ ಸಮಿತಿಯು ನಿಲುವಳಿ ಮಂಡಿಸಿದೆ ಎಂದು ಅವರು ತಿಳಿಸಿದ್ದಾರೆ. ಧನ್‌ಕಾವಾಡಿ–ಅಂಬೆಗಾಂವ್ ಕಾರ್ಪೊರೇಟರ್ ವರ್ಷಾ ತಾಪ್ಕಿರ್ ಪ್ರತಿಮೆ ನಿರ್ಮಾಣದ ಪ್ರಸ್ತಾವ ಇಟ್ಟಿದ್ದರು.
ಪ್ರತಿಮೆ ನಿರ್ಮಾಣಕ್ಕಾಗಿ ₹2 ಕೋಟಿ ಅನುದಾನ ಒದಗಿಸುವಂತೆಯೂ ಅವರು ಮನವಿ ಮಾಡಿದ್ದರು. ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ರಾಮನ ಪ್ರತಿಮೆ ಸ್ಥಾಪನೆಗೆ ಪ್ರೇರಣೆ. ಪ್ರತಿಮೆ ಸ್ಥಾಪನೆ ಮೂಲಕ ರಾಮನ ಜೀವನ ಮೌಲ್ಯಗಳನ್ನು ಬಿತ್ತರಿಸುವ ಉದ್ದೇಶ ಇದರ ಹಿಂದಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.