ADVERTISEMENT

ಕಾಂಗ್ರೆಸ್‌ ರಾಜಕೀಯ ಪಕ್ಷವಾಗಿ ಗುರುತಿಸಿಕೊಳ್ಳುವುದು ಗಾಂಧೀಜಿಗೆ ಇಷ್ಟವಿರಲಿಲ್ಲ

ರಾಯಪುರದಲ್ಲಿ ನಡೆಯುತ್ತಿರುವ ಸಾಹಿತ್ಯ ಉತ್ಸವದಲ್ಲಿ ಬಿಜೆಪಿ ನಾಯಕ ರಾಮ್‌ ಮಾಧವ್‌ 

ಪಿಟಿಐ
Published 20 ನವೆಂಬರ್ 2022, 14:23 IST
Last Updated 20 ನವೆಂಬರ್ 2022, 14:23 IST
ರಾಮ್‌ ಮಾಧವ್‌
ರಾಮ್‌ ಮಾಧವ್‌   

ರಾಯಪುರ, ಛತ್ತೀಸಗಡ: ‘ಮಹಾತ್ಮ ಗಾಂಧಿ ಅವರು ರಾಜಕೀಯ ಮುಕ್ತ ಭಾರತದಲ್ಲಿ ನಂಬಿಕೆ ಇಟ್ಟಿದ್ದರು. ಕಾಂಗ್ರೆಸ್‌ ರಾಜಕೀಯ ಪಕ್ಷವಾಗಿ ಗುರುತಿಸಿಕೊಳ್ಳುವುದು ಅವರಿಗೆ ಇಷ್ಟವಿರಲಿಲ್ಲ. ಅದು ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಸ್ವಾತಂತ್ರ್ಯ ಸಾಧನೆಯ ದಿಸೆಯಲ್ಲಿ ಕೆಲಸ ಮಾಡಬೇಕೆಂದು ಅವರು ಬಯಸಿದ್ದರು’ ಎಂದು ಬಿಜೆಪಿ ಹಿರಿಯ ನಾಯಕ ರಾಮ್‌ ಮಾಧವ್‌ ಹೇಳಿದ್ದಾರೆ.‌

ಇಲ್ಲಿ ಹಮ್ಮಿಕೊಳ್ಳಲಾಗಿರುವ ಸಾಹಿತ್ಯ ಉತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ‘ಗಾಂಧೀಜಿಯವರ ಈ ಸಲಹೆ ಒಪ್ಪಿಕೊಳ್ಳುವುದಕ್ಕೆ ಕಾಂಗ್ರೆಸ್‌ ನಾಯಕರು ಸಿದ್ಧವಿರಲಿಲ್ಲ. ಹೀಗಾಗಿ ಅವರು ಗಾಂಧೀಜಿ ಮಾತುಗಳತ್ತ ಲಕ್ಷ್ಯ ಕೊಡುವುದನ್ನೇ ನಿಲ್ಲಿಸಿದ್ದರು’ ಎಂದರು.

‘1947 ಆಗಸ್ಟ್‌ 15ನ್ನು ಎಲ್ಲರೂ ಸ್ವಾತಂತ್ರ್ಯ ದಿನ ಎಂದು ಕರೆದರು. ಆದರೆ ಗಾಂಧೀಜಿ ‘ಸ್ವಾತಂತ್ರ್ಯ’ ಎಂಬ ಪದ ಸಂಭೋದಿಸಲಿಲ್ಲ.ದೇಶವು ರಾಜಕೀಯವಾಗಿ ಸ್ವತಂತ್ರಗೊಂಡಿತು ಎಂದು ಹೇಳಿದ ಏಕೈಕ ವ್ಯಕ್ತಿ ಅವರು’ ಎಂದಿದ್ದಾರೆ.

ADVERTISEMENT

‘ಕಾಂಗ್ರೆಸ್‌ ವಿಸರ್ಜಿಸಬೇಕೆಂಬ ಗಾಂಧೀಜಿಯವರ ಬಯಕೆ ಮತ್ತೊಬ್ಬ ಗಾಂಧಿಯಿಂದ ಈಡೇರಬಹುದೆಂದು ತೋರುತ್ತದೆ’ ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿ ಅವರ ಕಾಲೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.