ADVERTISEMENT

ಮಹೀಂದ್ರಾ ಪ್ರಯಾಣಿಕ ವಾಹನ ಬೆಲೆ ಏರಿಕೆ ಜುಲೈ 1ರಿಂದ ಜಾರಿಗೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:11 IST
Last Updated 19 ಜೂನ್ 2019, 19:11 IST

ನವದೆಹಲಿ:ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯು ಜುಲೈ 1 ರಿಂದ ಜಾರಿಗೆ ಬರುವಂತೆ ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ₹ 36 ಸಾವಿರದವರೆಗೂ ಹೆಚ್ಚಳ ಮಾಡಿದೆ.

ಪ್ರಯಾಣಿಕ ವಾಹನಗಳಲ್ಲಿ ಎಐಎಸ್‌ 145 ಸುರಕ್ಷತಾ ನಿಯಮಗಳನ್ನು ಅಳವಡಿಸಬೇಕಿರುವುದರಿಂದ ಬೆಲೆ ಏರಿಕೆ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ.

ಸ್ಕಾರ್ಪಿಯೊ, ಬಲೆರೊ, ಟಿಯುವಿ3ಒಒ, ಕೆಯುವಿ1ಒಒ, ಎಕ್ಸ್‌ಯುವಿ5ಒಒ ಮತ್ತು ಮೊರಾಜೊ ಬೆಲೆಗಳಲ್ಲಿ ಏರಿಕೆಯಾಗಲಿದೆ.

ADVERTISEMENT

ಡ್ರೈವರ್‌ ಏರ್‌ಬ್ಯಾಗ್‌, ಡ್ರೈವರ್‌ ಮತ್ತು ಕೊ–ಡ್ರೈವರ್‌ಗೆ ಸೀಟ್‌ ಬೆಲ್ಟ್‌ ರಿಮೈಂಡರ್‌, ರೇರ್‌ ಪಾರ್ಕಿಂಗ್‌ ಸೆನ್ಸರ್‌ ಮತ್ತು ಅತಿಯಾದ ವೇಗದ ಬಗ್ಗೆ ಸೂಚನೆ ನೀಡುವ ಸೌಲಭ್ಯಗಳನ್ನು ಜುಲೈ 1 ರಿಂದ ಅಳವಡಿಸಬೇಕಿದೆ.

‘ಸುರಕ್ಷತಾ ಸೌಲಭ್ಯಗಳನ್ನು ಅಳವಡಿಸುವುದರಿಂದ ಬೆಲೆಯಲ್ಲಿ ಏರಿಕೆಯಾಗುತ್ತದೆ. ಹೀಗಾಗಿ ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಿಸಲಾಗುತ್ತಿದೆ’ ಎಂದು ಕಂಪನಿಯ ಅಧ್ಯಕ್ಷ ರಾಜನ್‌ ವಧೇರಾ ತಿಳಿಸಿದ್ದಾರೆ.

ಡೀಸೆಲ್‌ ವಾಹನ ಮಾರಾಟ ಇಲ್ಲ: ರೆನೊ
ಮುಂದಿನ ವರ್ಷದಿಂದ ಡೀಸೆಲ್‌ ಎಂಜಿನ್‌ ವಾಹನಗಳನ್ನು ಮಾರಾಟ ಮಾಡುವುದಿಲ್ಲ ಎಂದು ರೆನೊ ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.