ADVERTISEMENT

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 4:30 IST
Last Updated 28 ಜನವರಿ 2026, 4:30 IST
   

ರಾಜ್ಯ, ರಾಷ್ಟ್ರೀಯ, ಜಾಗತಿಕ ವಿದ್ಯಮಾನ, ಕ್ರೀಡೆ, ಮನರಂಜನೆಗೆ ಸಂಬಂಧಿಸಿದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

‘ಒಪ್ಪಂದಗಳ ತಾಯಿ’ಗೆ ದಾರಿ ‘ಮುಕ್ತ’: ಭಾರತದ ಇತಿಹಾಸ ಕಂಡ ಅತಿದೊಡ್ಡ ಒಪ್ಪಂದ ಅಂತಿಮ

‘ಎಲ್ಲ ಒಪ್ಪಂದಗಳ ತಾಯಿ’ ಎಂದು ಬಣ್ಣಿಸಲಾಗಿರುವ ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಮಾತುಕತೆ ಪೂರ್ಣಗೊಂಡಿದೆ ಎಂದು ಭಾರತ ಮತ್ತು ಇ.ಯು. ಮಂಗಳವಾರ ಘೋಷಿಸಿವೆ.

‌ಭಾರತ–ಐರೋಪ್ಯ ಒಕ್ಕೂಟ ಒಪ್ಪಂದ: ತಮ್ಮ ವಾಹನಗಳ ಬೆಲೆ ಇಳಿಯದು ಎಂದ ಬೆಂಜ್ ಇಂಡಿಯಾ

ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದಿಂದಾಗಿ (ಎಫ್‌ಟಿಎ) ಭಾರತೀಯ ವಾಹನ ತಯಾರಿಕಾ ವಲಯದಲ್ಲಿ ನಾವೀನ್ಯತೆಗೆ ಉತ್ತೇಜನ ದೊರೆಯಲಿದೆ ಎಂದು ಮರ್ಸಿಡೀಸ್–ಬೆಂಜ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಂತೋಷ್ ಅಯ್ಯರ್ ಮಂಗಳವಾರ ಹೇಳಿದ್ದಾರೆ. ಆದರೆ, ಒಪ್ಪಂದದ ಪರಿಣಾಮವಾಗಿ ತಮ್ಮ ಕಂಪನಿಯ ವಾಹನಗಳ ಬೆಲೆ ಇಳಿಕೆಯಾಗಬಹುದು ಎಂಬ ಲೆಕ್ಕಾಚಾರವನ್ನು ಅಲ್ಲಗಳೆದಿದ್ದಾರೆ.

ADVERTISEMENT

ಭಾರತ-ಐರೋಪ್ಯ ಒಕ್ಕೂಟದ ಸಂಬಂಧಗಳ ಭವಿಷ್ಯ ಆಶಾದಾಯಕವಾಗಿದೆ: ದ್ರೌಪದಿ ಮುರ್ಮು

ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಮಾತುಕತೆ ಪೂರ್ಣಗೊಂಡಿರುವ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಸ ವ್ಯಕ್ತಪಡಿಸಿದ್ದು, ಭಾರತ-ಐರೋಪ್ಯ ಒಕ್ಕೂಟದ ಸಂಬಂಧಗಳ ಭವಿಷ್ಯ ಆಶಾದಾಯಕವಾಗಿದೆ ಎಂದಿದ್ದಾರೆ.

ವಿಮಾನ ದುರಂತ: ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್‌ ಸಾವು

ಮುಂಬೈ: ಮಹಾರಾಷ್ಟ್ರದ ಬಾರಾಮತಿ ಬಳಿ ಸಂಭವಿಸಿದ ವಿಮಾನ ದುರಂತದಲ್ಲಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್‌ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮುಕ್ತ ವ್ಯಾಪಾರ ಒಪ್ಪಂದ: ಸುಂಕ ವಿನಾಯಿತಿಯಿಂದ ಭಾರತದ ಜವಳಿ ಉದ್ಯಮಕ್ಕೆ ಉತ್ತೇಜನ

ಭಾರತ ಮತ್ತು ಐರೋಪ್ಯ ಒಕ್ಕೂಟದ (ಇ.ಯು) ನಡುವಿನ ಮುಕ್ತ ವ್ಯಾಪಾರ ಒಪ್ಪಂದದ (ಎಫ್‌ಟಿಎ) ಬಳಿಕ ಇ.ಯು ಮಾರುಕಟ್ಟೆಯಲ್ಲಿ ಸುಂಕ ವಿನಾಯಿತಿ ದೊರೆಯುವುದರಿಂದ ದೇಶದ ಜವಳಿ ಉದ್ಯಮಕ್ಕೆ ಉತ್ತೇಜನ ಸಿಗಲಿದೆ ಎಂದು ವಾಣಿಜ್ಯ ಸಚಿವಾಲಯ ಮಂಗಳವಾರ ತಿಳಿಸಿದೆ.

ಲಕ್ಕುಂಡಿ: ಉತ್ಖನನದ ವೇಳೆ ಕಳಸದ ರೀತಿಯ ಪ್ರಾಚ್ಯ ಅವಶೇಷ ಪತ್ತೆ

ಗದಗ: ತಾಲ್ಲೂಕಿನ ಲಕ್ಕುಂಡಿ ಗ್ರಾಮದ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಉತ್ಖನನದ ವೇಳೆ ಮಂಗಳವಾರ ಕಳಸದಂತಿರುವ ಕಲ್ಲಿನ ಪ್ರಾಚ್ಯ ಅವಶೇಷ ಪತ್ತೆಯಾಗಿದೆ.

₹400 ಕೋಟಿ ದರೋಡೆ ಪ್ರಕರಣ: ದೂರು ದಾಖಲಾಗಿಲ್ಲ, ಸುಳಿವೂ ಇಲ್ಲ

ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಚೋರ್ಲಾ ಘಾಟ್‌ನಲ್ಲಿ ಮೂರು ತಿಂಗಳ ಹಿಂದೆ ನಡೆದಿದೆ ಎನ್ನಲಾದ ₹400 ಕೋಟಿ ದರೋಡೆ ಪ್ರಕರಣ ಕುರಿತು ದೂರು ದಾಖಲಾಗಿಲ್ಲ. ಅಷ್ಟೇ ಅಲ್ಲ; ಕಂಟೇನರ್‌ಗಳ ಮಾಲೀಕರು ಯಾರು, ಚಾಲಕರು ಯಾರು ಎಂಬ ಸುಳಿವೂ ಸಿಕ್ಕಿಲ್ಲ.

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ: ಯುಜಿಸಿ ನಿಯಮದ ವಿರುದ್ಧ ಸುಪ್ರೀಂಗೆ ಮೊರೆ

ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಹೋಗಲಾಡಿಸಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಜಾರಿಗೆ ತಂದಿರುವ ಹೊಸ ನಿಯಮದಲ್ಲಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆ ಉತ್ತೇಜಿಸುವ ನಿಯಮ –2026) ‘ಜಾತಿ ತಾರತಮ್ಯದ ವ್ಯಾಖ್ಯಾನ’ವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.  

IND vs NZ: ಭಾರತದ ಪ್ರಾಬಲ್ಯ ಮುಂದುವರಿವ ನಿರೀಕ್ಷೆ; ಒತ್ತಡದಲ್ಲಿ ಕಿವೀಸ್

ವಿಶಾಖಪಟ್ಟಣ: ಆತಿಥೇಯ ಭಾರತ ಈಗಾಗಲೇ ಟಿ20 ಸರಣಿ ಕೈವಶ ಮಾಡಿಕೊಂಡಿದೆ. ನ್ಯೂಜಿಲೆಂಡ್ ವಿರುದ್ಧ ಬುಧವಾರ ನಡೆಯುವ ನಾಲ್ಕನೇ ಪಂದ್ಯದಲ್ಲೂ ಇದೇ ರೀತಿಯ ಪ್ರಾಬಲ್ಯ ಮುಂದುವರಿಸುವ ವಿಶ್ವಾಸದಲ್ಲಿದೆ. ಇದರ ನಡುವೆ, ತಂಡವು ಪ್ರಮುಖ  ಸ್ಪಿನ್ನರ್‌ಗಳಿಂದ ಸುಧಾರಿತ ಪ್ರದರ್ಶನದ ನಿರೀಕ್ಷೆಯಲ್ಲಿದೆ.

ಭಾರತವೇ ಟಿ20 ವಿಶ್ವಕಪ್ ಗೆಲುವಿನ ನೆಚ್ಚಿನ ತಂಡ: ರಾಹುಲ್ ದ್ರಾವಿಡ್ ಅಭಿಮತ

ಬೆಂಗಳೂರು: ‘ಭಾರತ ತಂಡವು ಟಿ20 ಕ್ರಿಕೆಟ್ ಮಾದರಿಯಲ್ಲಿ ಬೇರೆಲ್ಲ ದೇಶಗಳಿಗಿಂತ ವಿಭಿನ್ನವಾಗಿ ಆಡುತ್ತಿದೆ. ಚುಟುಕು ಮಾದರಿಯಲ್ಲಿ ಇಲ್ಲಿಯ ಆಟಗಾರರ ಸಾಮರ್ಥ್ಯ ಅಮೋಘವಾಗಿದೆ. ಆದ್ದರಿಂದ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತವೇ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ’–

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.