ADVERTISEMENT

ರಜೌರಿಯಲ್ಲಿ ಸ್ಫೋಟಕ ಪತ್ತೆ: ತಪ್ಪಿದ ದುರಂತ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 13:57 IST
Last Updated 3 ಸೆಪ್ಟೆಂಬರ್ 2023, 13:57 IST
<div class="paragraphs"><p>ಸುಧಾರಿತ ಸ್ಫೋಟಕ ಪತ್ತೆಯಾದ ಸ್ಥಳದಲ್ಲಿ ಬಾಂಬ್‌ ನಿಷ್ಕ್ರಿಯ ದಳವು ಪರಿಶೀಲನೆ ನಡೆಸಿತು </p></div>

ಸುಧಾರಿತ ಸ್ಫೋಟಕ ಪತ್ತೆಯಾದ ಸ್ಥಳದಲ್ಲಿ ಬಾಂಬ್‌ ನಿಷ್ಕ್ರಿಯ ದಳವು ಪರಿಶೀಲನೆ ನಡೆಸಿತು

   

–ಪಿಟಿಐ ಚಿತ್ರ

ರಜೌರಿ/ ಜಮ್ಮು: ಜಮ್ಮು–ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಾನುವಾರ ಸುಧಾರಿತ ಸ್ಫೋಟಕವನ್ನು ಸಮಯಕ್ಕೆ ಸರಿಯಾಗಿ ಪತ್ತೆ ಮಾಡಿ ಬಹುದೊಡ್ಡ ದುರಂತವನ್ನು ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜಮ್ಮು–ಪೂಂಛ್‌ ರಾಷ್ಟ್ರೀಯ ಹೆದ್ದಾರಿಯ ಕಾಲುವೆಯೊಂದರ ಸಮೀಪ ಸುಧಾರಿತ ಸ್ಫೋಟಕವಿದ್ದ ಟಿಫಿನ್‌ ಬಾಕ್ಸ್‌ ಪತ್ತೆಯಾಗಿತ್ತು. ತಕ್ಷಣವೇ ಸಮೀಪದ ಸೇನಾ ಶಿಬಿರದ ಮೂರು ತಂಡಗಳು ಸ್ಥಳಕ್ಕೆ ದೌಡಾಯಿಸಿದವು. ಬಾಂಬ್‌ ನಿಷ್ಕ್ರಿಯ ದಳವೂ ಸ್ಥಳಕ್ಕೆ ಆಗಮಿಸಿ ಯಾವುದೇ ಹಾನಿಯಾಗದಂತೆ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಿತು.

ಮುಂಜಾಗ್ರತಾ ಕ್ರಮವಾಗಿ ಜನನಿಬಿಡ ಹೆದ್ದಾರಿಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.