ADVERTISEMENT

ನಗರ ಜೀವನ ಭಯದ ಯಾನ: ಸಮೀಕ್ಷಾ ವರದಿ

‘ಶೇ 51ರಷ್ಟು ಬೆಂಗಳೂರಿಗರಿಗೆ ರಾತ್ರಿ ಓಡಾಟವೇ ಬೇಡ’

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 20:14 IST
Last Updated 14 ನವೆಂಬರ್ 2018, 20:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾತ್ರಿ ಒಂಬತ್ತರ ನಂತರ ತಮ್ಮವರು ಮನೆಯ ಹೊರಗೆ ಒಂಟಿಯಾಗಿ ಇದ್ದಾರೆ ಎಂದರೆ ದೆಹಲಿ ಮತ್ತು ಬೆಂಗಳೂರಿನ ಬಹುತೇಕ ಮಂದಿಯನ್ನು ಭಯ ಮತ್ತು ಚಿಂತೆ ಆವರಿಸುತ್ತದೆ. ಮನೆಯ ಹೊರಗೆ ಇರುವುದು ಮಹಿಳೆಯೇ ಆಗಿರಲಿ, ಪುರುಷರೇ ಆಗಿರಲಿ ಅವರು ಮನೆಗೆ ವಾಪಸ್ ಬರುವವರೆಗೂ ಕುಟುಂಬದ ಸದಸ್ಯರ ಚಿಂತೆ ಕರಗುವುದಿಲ್ಲ. ತಡರಾತ್ರಿಯಾಗುತ್ತಿದ್ದಂತೆಯೇ ಹೀಗೆ ಚಿಂತೆಗೊಳಗಾಗುವ ಕುಟುಂಬಗಳ ಪ್ರಮಾಣ ಹೆಚ್ಚುತ್ತಲೇ ಹೋಗುತ್ತದೆ ಎಂದು ಸಮೀಕ್ಷೆಯೊಂದು ಹೇಳಿದೆ.

ನಡವಳಿಕೆ ಬದಲು

ತಡರಾತ್ರಿಯಲ್ಲಿ ತಮ್ಮ ನಗರ ಸುರಕ್ಷಿತವಲ್ಲ ಎಂದು ಭಾವಿಸುವ ಜನರು ತಡರಾತ್ರಿಯ ತಮ್ಮ ನಡವಳಿಕೆಯಲ್ಲಿ ತುಸು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಈ ನಗರಗಳ ಜನರು ತಡರಾತ್ರಿಯಲ್ಲಿ ಒಬ್ಬಂಟಿಯಾಗಿ ಓಡಾಡದೇ ಇರಲು ಬಯಸುತ್ತಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಶೇ 51ರಷ್ಟು, ಚೆನ್ನೈನಲ್ಲಿ ಶೇ 60ರಷ್ಟು ಮತ್ತು ಮುಂಬೈನಲ್ಲಿ ಶೇ 30ರಷ್ಟು ಜನರು ತಡರಾತ್ರಿಯಲ್ಲಿ ಒಬ್ಬಂಟಿಯಾಗಿ ಓಡಾಡಲು ಬಯಸುವುದಿಲ್ಲ. ಅದೇ ರೀತಿ ದೆಹಲಿಯ ಶೇ 47, ಬೆಂಗಳೂರಿನ ಶೇ 36, ಚೆನ್ನೈನ ಶೇ 39 ಮತ್ತು ಮುಂಬೈನ ಶೇ 40ರಷ್ಟು ಜನರು ತಡರಾತ್ರಿಯಲ್ಲಿ ಒಬ್ಬಂಟಿಯಾಗಿ ಓಡಾಡುವಾಗ ತಮ್ಮ ಕೈಯಲ್ಲಿರುವ ವಸ್ತುಗಳು ಯಾರ ಕಣ್ಣಿಗೂ ಕಾಣಿಸದಂತೆ ಎಚ್ಚರ ವಹಿಸುತ್ತಾರೆ.

ADVERTISEMENT

* ಮುಂಬೈನ ಐಡಿಎಫ್‌ಸಿ ಇನ್‌ಸ್ಟಿಟ್ಯೂಟ್ ನಿಂದ ಅಧ್ಯಯನ
*ರಾತ್ರಿಯ ವೇಳೆ ಒಬ್ಬಂಟಿಯಾಗಿ ಮನೆಯ ಹೊರಗೆ ಇರುವುದು ಸುರಕ್ಷಿತವಲ್ಲ ಎಂಬ ಭಾವನೆ ದೆಹಲಿಯ ಬಹುತೇಕ ಜನರಲ್ಲಿದೆ
* ದೆಹಲಿಗಿಂತಲೂ ಬೆಂಗಳೂರು ಮತ್ತು ಚೆನ್ನೈ ಸುರಕ್ಷಿತ ಎಂಬ ಭಾವನೆ ಆಯಾ ನಗರವಾಸಿಗಳಲ್ಲಿದೆ
*ತಡರಾತ್ರಿಯಲ್ಲೂ ತಮ್ಮ ನಗರ ಸುರಕ್ಷಿತ ಎಂದು ಭಾವಿಸುವ ಮಂದಿಯ ಸಂಖ್ಯೆ ಮುಂಬೈನಲ್ಲಿ ಅಧಿಕವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.