ADVERTISEMENT

Makar Sankranti | ಮಕರ ಸಂಕ್ರಾಂತಿ ಸಂಭ್ರಮ: ನದಿಗಳಲ್ಲಿ ಭಕ್ತರ ಪುಣ್ಯ ಸ್ನಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2024, 2:48 IST
Last Updated 15 ಜನವರಿ 2024, 2:48 IST
<div class="paragraphs"><p>ಹರಿದ್ವಾರದಲ್ಲಿ ಭಕ್ತರ ಪುಣ್ಯಸ್ನಾನ</p></div>

ಹರಿದ್ವಾರದಲ್ಲಿ ಭಕ್ತರ ಪುಣ್ಯಸ್ನಾನ

   

– ಎಎನ್‌ಐ ವಿಡಿಯೊದ ಸ್ಕ್ರೀನ್ ಶಾಟ್

ಬೆಂಗಳೂರು: ಮಕರ ಸಂಕ್ರಮಣದ ಅಂಗವಾಗಿ ದೇಶದ ವಿವಿಧ ದೇಗುಲಗಳಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು. ಪವಿತ್ರ ನದಿಗಳಲ್ಲಿ ಪುಣ್ಯ ಸ್ನಾನ ಮಾಡಿದರು.

ADVERTISEMENT

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಗೋರಕನಾಥ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಗೋರಕನಾಥನಿಗೆ ’ಖಿಚಡಿ’ ಅರ್ಪಿಸಲು ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

ಉತ್ತರಾಖಂಡದ ಹರಿದ್ವಾರದಲ್ಲಿ ಹಾಗೂ ಉತ್ತರ ಪ್ರದೇಶದ ವಾರಾಣಸಿ ಹಾಗೂ ಪ್ರಯಾಗರಾಜ್‌ನಲ್ಲಿ ಗಂಗಾ ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು.

ಮಕರವಿಳಕ್ಕು ಹಬ್ಬಕ್ಕಾಗಿ ತೆರದ ಶಬರಿಮಲೆಯ ಅಯ್ಯಪ್ಪ ಸ್ವಾಮಿಯ ದೇಗುಲದಲ್ಲಿ ಭಕ್ತರ ದಂಡೇ ಸೇರಿದೆ.

ತಮಿಳುನಾಡಿನ ವಿವಿಧ ಭಾಗಗಳಲ್ಲಿ ಜಲ್ಲಿಕಟ್ಟು ಸ್ಪರ್ಧೆ ಆರಂಭವಾಗಿದೆ. ಸೋಮವಾರ ಮುಂಜಾನೆಯಿಂದಲೇ ಎತ್ತುಗಳ ಆರೋಗ್ಯ ತಪಾಸಣೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.