ADVERTISEMENT

ಬೆಲೆ ಏರಿಕೆ, ನಿರುದ್ಯೋಗ; ಜನರಿಂದ ಬಿಜೆಪಿಗೆ ತಕ್ಕ ಪಾಠ: ಮಲ್ಲಿಕಾರ್ಜುನ ಖರ್ಗೆ

ಪಿಟಿಐ
Published 5 ಜುಲೈ 2023, 6:19 IST
Last Updated 5 ಜುಲೈ 2023, 6:19 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಲೂಟಿಯಿಂದಾಗಿ ದೇಶದಲ್ಲಿ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಬುಧವಾರ ಆರೋಪಿಸಿದ್ದಾರೆ.

ಬಿಜೆಪಿ ಅಧಿಕಾರದ ದುರಾಸೆಯಲ್ಲಿ ಮುಳುಗಿದೆ. ಆದರೆ ಜನರು ಈಗ ಜಾಗೃತರಾಗಿದ್ದು, ಬಿಜೆಪಿಯ ಪೊಳ್ಳು ಭರವಸೆಗಳನ್ನು ನಂಬುವುದಿಲ್ಲ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದ್ದಾರೆ.

ಈ ಸಂಬಂಧ ಅಂಕಿಅಂಶ ಸಹಿತ ವಿಡಿಯೊವನ್ನು ಖರ್ಗೆ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ADVERTISEMENT

ತರಕಾರಿಗಳ ಬೆಲೆ ಗಗನಕ್ಕೇರುತ್ತಿದ್ದು, ದೇಶದಲ್ಲಿ ನಿರುದ್ಯೋಗ ದರ ಶೇ 8.45ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ದರ ಶೇ 8.73 ಆಗಿದೆ. ಗ್ರಾಮಗಳಲ್ಲಿ ನರೇಗಾ ಯೋಜನೆಗೆ ಬೇಡಿಕೆ ಹೆಚ್ಚಿದೆ. ಆದರೆ ಕೆಲಸವಿಲ್ಲ ಎಂದು ದೂರಿದ್ದಾರೆ.

ಪ್ರಧಾನಿ ಅವರೇ, ಚುನಾವಣೆಗೂ ಮುನ್ನ 'ಅಚ್ಛೇ ದಿನ್', 'ಅಮೃತ ಕಾಲ' ಘೋಷಣೆಯ ಕುರಿತು ದೇಶದ ಜನತೆಗೆ ಅರ್ಥವಾಗಿದೆ. ಜಾಹೀರಾತಿನ ಮೂಲಕ ನಿಮ್ಮ ಸರ್ಕಾರದ ವೈಫಲ್ಯಗಳನ್ನು ಮುಚ್ಚಿ ಹಾಕಬಹುದು. ಆದರೆ ಈ ಬಾರಿ ಹಾಗಾಗುವುದಿಲ್ಲ. ಜನ ಸಾಮಾನ್ಯರು ಜಾಗೃತರಾಗಿದ್ದು, ನಿಮ್ಮ ಪೊಳ್ಳು ಭರವಸೆಗಳಿಗೆ ಬಿಜೆಪಿ ವಿರುದ್ಧವೇ ಮತ ಚಲಾಯಿಸುವ ಮೂಲಕ ಉತ್ತರಿಸುತ್ತಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.