ADVERTISEMENT

ಬಂಗಾಳ ಇಲ್ಲದಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ: ಮಮತಾ ಬ್ಯಾನರ್ಜಿ

ಪಿಟಿಐ
Published 14 ಆಗಸ್ಟ್ 2025, 10:13 IST
Last Updated 14 ಆಗಸ್ಟ್ 2025, 10:13 IST
<div class="paragraphs"><p>ಮಮತಾ ಬ್ಯಾನರ್ಜಿ</p></div>

ಮಮತಾ ಬ್ಯಾನರ್ಜಿ

   

(ಪಿಟಿಐ ಚಿತ್ರ)

ಕೋಲ್ಕತ್ತ: 'ಒಂದು ವೇಳೆ ಬಂಗಾಳ ಇಲ್ಲದಿದ್ದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತಿರಲಿಲ್ಲ' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು (ಗುರುವಾರ) ಹೇಳಿದ್ದಾರೆ.

ADVERTISEMENT

'ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಗಮನಾರ್ಹ ಕೊಡುಗೆ ಸಲ್ಲಿಸಿರುವ ರವೀಂದ್ರನಾಥ ಟ್ಯಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಂತಹ ವ್ಯಕ್ತಿಗಳು ಈ ನೆಲದಲ್ಲಿ ಜನಿಸಿದರು' ಎಂದು ಮಮತಾ ಉಲ್ಲೇಖಿಸಿದ್ದಾರೆ.

'ಕನ್ಯಾಶ್ರೀ' ಯೋಜನೆಯ 12ನೇ ವರ್ಷಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, 'ಬಂಗಾಳವು ವೈವಿಧ್ಯತೆಯ ನಡುವೆ ಏಕತೆಗಾಗಿ ನಿಂತಿರುವ ಭರವಸೆಯ ದಾರಿದೀಪವಾಗಿದೆ' ಎಂದು ಪ್ರತಿಪಾದಿಸಿದ್ದಾರೆ.

'ರಾಷ್ತ್ರಗೀತೆ', 'ರಾಷ್ಟ್ರಗಾನ' ಹಾಗೂ 'ಜೈ ಹಿಂದ್' ಘೋಷಣೆ ಬಂಗಾಳಿಗಳ ಸೃಷ್ಟಿಯಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಭಾಷೆಯ ವಿಚಾರದಲ್ಲಿ ಬಂಗಾಳದ ಕಾರ್ಮಿಕರ ಮೇಲೆ ಬಿಜೆಪಿ ಅಧಿಕಾರದ ರಾಜ್ಯಗಳಲ್ಲಿ ಹಿಂಸೆ ನೀಡಲಾಗುತ್ತಿದೆ ಎಂದು ಮಮತಾ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.