ADVERTISEMENT

ಉಮರ್ ಖಾಲಿದ್‌ಗೆ ಮಮ್ದಾನಿ ಪತ್ರ: ಬಿಜೆಪಿ, ವಿಎಚ್‌ಪಿ ಕಿಡಿ

ಪಿಟಿಐ
Published 2 ಜನವರಿ 2026, 16:01 IST
Last Updated 2 ಜನವರಿ 2026, 16:01 IST
<div class="paragraphs"><p>ಉಮರ್ ಖಾಲಿದ್‌</p></div>

ಉಮರ್ ಖಾಲಿದ್‌

   

ನವದೆಹಲಿ: ಜೈಲಿನಲ್ಲಿರುವ ಜೆಎನ್‌ಯು ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್‌ಗೆ ಪತ್ರ ಬರೆಯುವ ಮೂಲಕ ನ್ಯೂಯಾರ್ಕ್ ನಗರದ ಮೇಯರ್ ಜೊಹ್ರಾನ್ ಮಮ್ದಾನಿ ಅವರು ಭಾರತದ ಆಂತರಿಕ ವಿಷಯದಲ್ಲಿ ಮಧ್ಯಪ್ರವೇಶ ಮಾಡುತ್ತಿದ್ದಾರೆ’ ಎಂದು ಆರೋಪಿಸಿರುವ ಬಿಜೆಪಿ, ಇಂತಹ ಯಾವುದೇ ಪ್ರಯತ್ನವನ್ನು ಭಾರತ ಸಹಿಸುವುದಿಲ್ಲ ಎಂದು ಹೇಳಿದೆ.

ಜೊಹ್ರಾನ್ ಮಮ್ದಾನಿ ಅವರು ಖಾಲಿದ್‌ಗೆ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಭಾರತದ ಆಂತರಿಕ ವಿಷಯಗಳ ಬಗ್ಗೆ ಮಮ್ದಾನಿ ಪ್ರತಿಕ್ರಿಯಿಸುವ ಹಕ್ಕಿನ ಕುರಿತು ಪ್ರಶ್ನಿಸಿದರು ‘ಭಾರತದ ಸಾರ್ವಭೌಮತ್ವವನ್ನು ಪ್ರಶ್ನಿಸಿದರೆ, 140 ಕೋಟಿ ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತಾರೆ’ ಎಂದು ಪ್ರತಿಪಾದಿಸಿದರು. ‘ಭಾರತದ ನಾಗರಿಕರಿಗೆ ದೇಶದ ಕಾನೂನು ವ್ಯವಸ್ಥೆ ಮೇಲೆ ಸಂಪೂರ್ಣ ನಂಬಿಕೆ ಇದೆ’ ಎಂದೂ ಹೇಳಿದರು.

ADVERTISEMENT

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ), ‘ಭಾರತವನ್ನು ವಿಭಜಿಸುವ ಕುರಿತು ಮಾತನಾಡುವಂತಹ ಅಪರಾಧಿಗಳ ರಕ್ಷಣೆಗೆ ಬರುವ ಮೂಲಕ ಮಮ್ದಾನಿ ಅವರು ಕುರಾನ್ ಅನ್ನು ಅವಮಾನಿಸಿದ್ದಾರೆ’ ಎಂದು ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.