ಕೊಲ್ಲಂ (ಕೇರಳ): ಫೋನ್ ಮೂಲಕ ಪತ್ನಿಗೆ ತ್ರಿವಳಿ ತಲಾಖ್ ಹೇಳಿದ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಕೊಲ್ಲಂ ಜಿಲ್ಲೆಯ ಮೈನಾಗಪಳ್ಳಿ ಮೂಲದ ಅಬ್ದುಲ್ ಬಾಸಿತ್‌ನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದರು.
‘ಮೊದಲ ಮದುವೆ ಬಗ್ಗೆ ಮುಚ್ಚಿಟ್ಟು ಬಾಸಿತ್ ನನ್ನನ್ನು ವಿವಾಹವಾಗಿದ್ದರು. ಮೊದಲ ಪತ್ನಿ ಬಾಸಿತ್‌ನ ಸ್ವಂತ ಮನೆಯಲ್ಲಿದ್ದ ಕಾರಣ ನನ್ನನ್ನು ಬಾಡಿಗೆ ಮನೆಯಲ್ಲಿ ಇರಿಸಿದ್ದರು. ಮೊದಲ ಮದುವೆಯ ವಿಷಯ ತಿಳಿದು ನಾನು ಪ್ರಶ್ನಿಸಿದಾಗ, ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಆರಂಭಿಸಿದರು’ ಎಂದು ಬಾಸಿತ್ ಪತ್ನಿ(20 ವಯಸ್ಸು) ದೂರಿನಲ್ಲಿ ಉಲ್ಲೇಖಿಸಿದ್ದಾರೆ.
‘ಬೇರೆ ಮದುವೆಯಾಗುವುದಾಗಿಯೂ ಬಾಸಿತ್ ಬೆದರಿಕೆ ಒಡ್ಡಿದ್ದರು. ಇದರಿಂದ ಬೇಸತ್ತು ನನ್ನ ಪೋಷಕರ ಮನೆಗೆ ಹೋಗಿದ್ದೆ. ಜನವರಿ 19ರಂದು ಕರೆ ಮಾಡಿದ್ದ ಬಾಸಿತ್ ತ್ರಿವಳಿ ತಲಾಖ್ ಹೇಳಿದರು’ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.