ADVERTISEMENT

ಕುಡಿಯುವ ನೀರಿನ ಟ್ಯಾಂಕಿಗೆ ಶೌಚಾಲಯದ ನೀರಿನ ಪೈಪ್ ಲೈನ್ ಜೋಡಣೆ: ಅಧಿಕಾರಿ ಅಮಾನತು

ಪಿಟಿಐ
Published 7 ಮಾರ್ಚ್ 2021, 12:41 IST
Last Updated 7 ಮಾರ್ಚ್ 2021, 12:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮಾಂಡ್‌ಸೌರ್ (ಮಧ್ಯಪ್ರದೇಶ): ಹೊರಗುತ್ತಿಗೆಯ ನೈರ್ಮಲ್ಯ ಕಾರ್ಮಿಕನೊಬ್ಬ ಕುಡಿಯುವ ನೀರಿನ ಟ್ಯಾಂಕಿಗೆ ಶೌಚಾಲಯದ ನೀರಿನ ಪೈಪ್‌ಲೈನ್ ಜೋಡಿಸಿದ ಕಾರಣಕ್ಕಾಗಿ ಮಧ್ಯಪ್ರದೇಶದ ಮಾಂಡ್‌ಸೌರ್‌ನ ರೈಲ್ವೆ ಸ್ಟೇಷನ್ ಮಾಸ್ಟರ್‌ನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

‘ಚೌಥ್ಮಲ್ ಮೀನಾ ಅಮಾನತುಗೊಂಡ ರೈಲ್ವೆ ಸ್ಟೇಷನ್ ಮಾಸ್ಟರ್. ರೈಲ್ವೆ ಇಲಾಖೆ ವಿಭಾಗದ ಅಡಿಯಲ್ಲಿ ಬರುವ ಗರೋತ್ ನಿಲ್ದಾಣದಲ್ಲಿ ಮಾರ್ಚ್ 1ರಂದು ಈ ಘಟನೆ ನಡೆದಿದೆ’ ಎಂದು ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಅಜಯ್ ಕುಮಾರ್ ಪಾಲ್ ಹೇಳಿದ್ದಾರೆ.

‘ಖಾಸಗಿ ಸಂಸ್ಥೆಯ ನೈರ್ಮಲ್ಯ ಕಾರ್ಮಿಕನೊಬ್ಬ ಶೌಚಾಲಯದ ಪೈಪ್‌ಲೈನ್ ಅನ್ನು ಕುಡಿಯುವ ನೀರಿನ ಟ್ಯಾಂಕಿನೊಂದಿಗೆ ಜೋಡಿಸಿದ್ದ. ಇದು ಗಮನಕ್ಕೆ ಬರುತ್ತಿದ್ದಂತೆಯೇ ಟ್ಯಾಂಕ್ ಅನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ. ಈ ನೀರನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಇದಕ್ಕೆ ಕಾರಣರಾದ ಸ್ಟೇಷನ್ ಮಾಸ್ಟರ್ ಚೌಥ್ಮಲ್ ಮೀನಾ ಅವರನ್ನು ಅಮಾನತುಗೊಳಿಸಲಾಗಿದೆ. ನೈರ್ಮಲ್ಯ ಕಾರ್ಮಿಕನನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ’ ಎಂದು ಪಾಲ್ ವಿವರಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.