ADVERTISEMENT

ಜೀವ ಉಳಿಸಿಕೊಳ್ಳಲು ಚಿರತೆಯನ್ನೇ ಹತ್ಯೆ ಮಾಡಿದ ಕೇರಳದ ವ್ಯಕ್ತಿ

ಕೇರಳದ ವ್ಯಕ್ತಿಯೊಬ್ಬರು, ದಾಳಿಯಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಚಿರತೆಯನ್ನೇ ಹತ್ಯೆ ಮಾಡಿದ್ದಾರೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಸೆಪ್ಟೆಂಬರ್ 2022, 2:19 IST
Last Updated 4 ಸೆಪ್ಟೆಂಬರ್ 2022, 2:19 IST
   

ತಿರುವನಂತಪುರ: ಕೇರಳದ ಇಡುಕ್ಕಿ ಜಿಲ್ಲೆಯ ಮಾಂಕುಳಂ ಪ್ರದೇಶದಲ್ಲಿ ವ್ಯಕ್ತಿಯೊಬ್ಬರು ತಮ್ಮ ಮೇಲೆ ದಾಳಿಗೆ ಯತ್ನಿಸಿದ ಚಿರತೆಯನ್ನೇ ಹತ್ಯೆ ಮಾಡಿದ್ದಾರೆ.

ಸುಮಾರು 12 ವರ್ಷದ ಹೆಣ್ಣು ಚಿರತೆಯೊಂದು ಮಾಂಕುಳಂನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿತ್ತು. ಜತೆಗೆ ಜಾನುವಾರುಗಳನ್ನು ಹತ್ಯೆ ಮಾಡುತ್ತಿತ್ತು.

ಶನಿವಾರ ಬೆಳಗ್ಗೆ ಗೋಪಾಲನ್ (47) ಎಂಬುವವರು ಹೊರಗಡೆ ಹೋಗಿದ್ದ ಸಂದರ್ಭದಲ್ಲಿ ಚಿರತೆ ಎದುರಾಗಿತ್ತು. ಗೋಪಾಲನ್ ಮೇಲೆ ಚಿರತೆ ದಾಳಿ ಮಾಡಿದ್ದು, ಅವರಿಗೆ ಗಾಯಗಳಾಗಿದೆ.

ADVERTISEMENT

ಆ ಸಂದರ್ಭದಲ್ಲಿ, ರಕ್ಷಣೆಗಾಗಿ ಇರಿಸಿಕೊಂಡಿದ್ದ ಚೂರಿಯನ್ನು ಗೋಪಾಲನ್ ಅವರು ಚಿರತೆಯತ್ತ ಬೀಸಿದ್ದಾರೆ. ಅದು ಚಿರತೆಯ ತಲೆ ಭಾಗದಲ್ಲಿ ಗಂಭೀರ ಸ್ವರೂಪದ ಗಾಯ ಉಂಟುಮಾಡಿದ್ದು, ರಕ್ತಸ್ರಾವದಿಂದ ಮೃತಪಟ್ಟಿದೆ.

ಗಾಯಗೊಂಡಿರುವ ಗೋಪಾಲನ್ ಅವರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸ್ವರಕ್ಷಣೆಗಾಗಿ ಅವರು ಚಿರತೆಯ ಹತ್ಯೆ ಮಾಡಿರುವುದರಿಂದ ಅವರ ವಿರುದ್ಧ ದೂರು ದಾಖಲಾಗಿಲ್ಲ ಎಂದು ಮಾಂಕುಳಂ ಪ್ರದೇಶದ ಅರಣ್ಯಾಧಿಕಾರಿ ಜಯಚಂದ್ರನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.