ADVERTISEMENT

ದೆಹಲಿ: ಮೆಟ್ರೊ ರೈಲಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಪಿಟಿಐ
Published 10 ಫೆಬ್ರುವರಿ 2023, 18:26 IST
Last Updated 10 ಫೆಬ್ರುವರಿ 2023, 18:26 IST
   

ನವದೆಹಲಿ: ದೆಹಲಿ ಪೂರ್ವಭಾಗದ ನಿರ್ಮಾಣ್ ವಿಹಾರ್ ಮೆಟ್ರೊ ರೈಲು ನಿಲ್ದಾಣದಲ್ಲಿ ಶನಿವಾರ ಬೆಳಿಗ್ಗೆ ಸೇಲ್ಸ್‌ಮ್ಯಾನ್ ಒಬ್ಬರು ಮೆಟ್ರೊ ರೈಲಿನ ಮುಂಭಾಗದಲ್ಲಿ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಅತುಲ್ ಅಗರ್‌ವಾಲ್ ಎಂದು ಗುರುತಿಸಲಾಗಿದೆ. ರೈಲಿನ ಮುಂಭಾಗ ಬಿದ್ದಿದ್ದ ಅತುಲ್ ಅವರನ್ನು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅವರು ಮಧ್ಯಾಹ್ನ 1 ಗಂಟೆಯ ವೇಳೆಗೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.