ಬಿಜಾಪುರ: ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಇರಿಸಿದ್ದ ಸ್ಫೋಟಕ ವಸ್ತುವಿನಿಂದ(ಐಇಡಿ) ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಮುತವೆಂಡಿ ಗ್ರಾಮದ ಬಳಿ ಶನಿವಾರ ಘಟನೆ ಸಂಭವಿಸಿದ್ದು, ಸ್ಫೋಟಕ ವಸ್ತುವಿನ ಮೇಲೆ ಕಾಲಿಟ್ಟ ಸ್ಥಳೀಯ ನಿವಾಸಿ ಗಡಿಯ ಎಂಬುವವರು ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಸೋಮವಾರ ಮಾಹಿತಿ ದೊರಕಿದೆ.
ಬಸ್ತರ್ ಭಾಗದಲ್ಲಿ ಗಸ್ತು ತಿರುಗುವ ಪೊಲೀಸರನ್ನು ಗುರಿಯಾಗಿಸಿಕೊಂಡು ನಕ್ಸಲರು ಸ್ಫೋಟಕವನ್ನು ಇರಿಸುತ್ತಿದ್ದು, ಇದಕ್ಕೆ ನಾಗರಿಕರು ಕೂಡ ಬಲಿಯಾಗುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.