ಕೃಪೆ: ಎಕ್ಸ್
ಮುಂಬೈ: ಆಟವಾಡುತ್ತಿದ್ದ 11 ವರ್ಷದ ಬಾಲಕನ ಮೇಲೆ ಸಾಕುನಾಯಿ ದಾಳಿ ಮಾಡುವುದನ್ನು ನೋಡಿ ನಗುತ್ತಾ ಸಂಭ್ರಮಿಸುತ್ತಿದ್ದ ಮಾಲೀಕನನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮುಂಬೈನ ಉಪನಗರ ಮಾನ್‌ಖುರ್ದ್‌ನಲ್ಲಿ ನಾಯಿಯು ಮಂಗಳವಾರ ರಾತ್ರಿ ದಾಳಿ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಬಾಲಕನ ತಂದೆ ನೀಡಿದ ದೂರಿನ ಪ್ರಕಾರ, ವಸತಿ ಪ್ರದೇಶದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾದಲ್ಲಿ ಆಟವಾಡುತ್ತಿದ್ದ ಬಾಲಕನ ಮೇಲೆ ಆರೋಪಿ ಸೊಹೈಲ್ ಹಸನ್ ಖಾನ್ (43) ತನ್ನ ಸಾಕುನಾಯಿ 'ಪಿಟ್ ಬುಲ್' ಅನ್ನು ಬಿಟ್ಟಿದ್ದಾನೆ ಎನ್ನಲಾಗಿದೆ.
ನಾಯಿ ಬಾಲಕನ ಮೇಲೆ ದಾಳಿ ಮಾಡುತ್ತಿದ್ದಾಗ ಆರೋಪಿಯು ನಗುತ್ತಿರುವುದು, ಅಲ್ಲಿದ್ದ ಇತರರು ಸಂಭ್ರಮಿಸುತ್ತಿರುವುದು ಹಾಗೂ ಆಟೋದಿಂದ ಇಳಿದು ಓಡಿದರೂ, ನಾಯಿ ಬಾಲಕನನ್ನೇ ಹಿಂಬಾಲಿಸಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ನಾಯಿಯು ಬಾಲಕನ ಗಲ್ಲಕ್ಕೆ ಕಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.