ADVERTISEMENT

ಶೇ 86 ರಷ್ಟು ಜನರಿಗೆ ಕೋವಿಡ್‌ ಲಸಿಕೆ ಮೊದಲ ಡೋಸ್ ಪೂರೈಕೆ: ಸಚಿವ ಮಾಂಡವೀಯ

ಪಿಟಿಐ
Published 10 ಡಿಸೆಂಬರ್ 2021, 12:24 IST
Last Updated 10 ಡಿಸೆಂಬರ್ 2021, 12:24 IST
ಸಚಿವ ಮನ್‌ಸುಖ್‌ ಮಾಂಡವೀಯ
ಸಚಿವ ಮನ್‌ಸುಖ್‌ ಮಾಂಡವೀಯ   

ನವದೆಹಲಿ: ಭಾರತದ ಅರ್ಹ ಜನಸಂಖ್ಯೆಯ ಸುಮಾರು ಶೇ 86 ರಷ್ಟು ಜನರು ಕೋವಿಡ್ ಲಸಿಕೆಯಮೊದಲ ಡೋಸ್ ಪಡೆದಿದ್ದಾರೆ. ಆದಷ್ಟು ಬೇಗ ಶೇ 100 ರ ಗುರಿಯನ್ನು ತಲುಪಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಶುಕ್ರವಾರ ಲೋಕಸಭೆಗೆ ತಿಳಿಸಿದರು.

ಅಮೆರಿಕ, ಜರ್ಮನಿ ಮತ್ತು ಫ್ರಾನ್ಸ್‌ ಸೇರಿದಂತೆ ಇತರ ರಾಷ್ಟ್ರಗಳ ಕೋವಿಡ್‌ ಲಸಿಕೆ ನೀಡುವಿಕೆಯ ಮಟ್ಟದ ದತ್ತಾಂಶಗಳನ್ನು ಸಚಿವರು ಹಂಚಿಕೊಂಡರು. ಲಸಿಕೆ ನೀಡುವಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಅವರು ಪೂರಕ ಪ್ರಶ್ನೆಗಳಿಗೆ ಉತ್ತರಿಸಿದರು.

ರಾಜ್ಯಗಳ ಬಳಿ ಇನ್ನೂ 7 ಕೋಟಿ ಲಸಿಕೆಗಳು ಬಾಕಿ ಉಳಿದಿವೆ ಎಂದ ಅವರು, ಲಸಿಕೆ ಪಡೆಯುಲುಹಿಂಜರಿಕೆ ಮಾಡಿದರೆ ಹಲವು ಅನಾರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ಓಮೈಕ್ರಾನ್‌ ರೂಪಾಂತರ ತಳಿ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದರ ಬಗ್ಗೆ ಅಧ್ಯಯನ ನಡೆಯುತ್ತಿದ್ದು,ಅದು ಪೂರ್ಣಗೊಂಡ ನಂತರ ಈ ಹೊಸ ರೂಪಾಂತರಕ್ಕೆ ಯಾವ ಲಸಿಕೆಯು ಪರಿಣಾಮಕಾರಿ ಎಂಬುದು ತಿಳಿಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.