ಇಂಫಾಲ್: ಮಣಿಪುರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ. ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಿದ್ದಾರೆ. ಹೊಸ ಮುಖ್ಯಮಂತ್ರಿಯ ಬಗ್ಗೆ ಯಾವುದೇ ಮಾಹಿತಿಯನ್ನು ಪಕ್ಷ ನೀಡಿಲ್ಲ. ಸೋಮವಾರದಿಂದ ಮಣಿಪುರದಲ್ಲಿ ಬಜೆಟ್ ಅಧಿವೇಶನ ನಡೆಯಲಿದೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗುತ್ತದೆ ಎನ್ನಲಾಗುತ್ತಿದೆ.
2023ರ ಮೇ ತಿಂಗಳಿನಿಂದ ಮೈತೇಯಿ ಸಮುದಾಯದ ಮತ್ತು ಕುಕಿ ಬುಡಕಟ್ಟು ಸಮುದಾಯಗಳ ನಡುವೆ ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ನಡೆಯುತ್ತಿದೆ. ಸಂಘರ್ಷ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಆದ್ದರಿಂದ ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಲೇಬೇಕು ಎಂಬ ಒತ್ತಡ ಇತ್ತು. 2023ರ ಜುಲೈನಲ್ಲಿ ಬಿರೇನ್ ಸಿಂಗ್ ಅವರು ರಾಜೀನಾಮೆ ನೀಡಲು ಮುಂದಾಗಿದ್ದರು. ಆ ವೇಳೆ ಮೈತೇಯಿ ಸಮುದಾಯದ ಮಹಿಳೆಯರು ಮುಖ್ಯಮಂತ್ರಿ ನಿವಾಸದ ಎದುರು ಜಮಾಯಿಸಿ, ರಾಜೀನಾಮೆ ಪತ್ರವನ್ನು ಹರಿದುಹಾಕಿದ್ದರು.
ಸಂಘರ್ಷ ಹೆಚ್ಚಾದಂತೆ, ಸರ್ಕಾರವು ಕುಕಿ ಬುಡಕಟ್ಟು ಸಮುದಾಯದ ಜನರ ಮಾತ್ರವಲ್ಲ ಮೈತೇಯಿ ಸಮುದಾಯದ ಜನರ ವಿಶ್ವಾಸವನ್ನೂ ಬಿರೇನ್ ಸಿಂಗ್ ಅವರ ಕಳೆದುಕೊಳ್ಳತೊಡಗಿದರು. ಇದೇ ಕಾರಣಕ್ಕೆ ಬಿರೇನ್ ಸಿಂಗ್ ಅವರ ನಾಯಕತ್ವವನ್ನು ಬಿಜೆಪಿಯ ಹಲವು ಶಾಸಕರು ವಿರೋಧಿಸಿದರು. ಸರ್ಕಾರದ ಹಲವು ಸಭೆಗಳಿಗೆ ಹಲವು ಶಾಸಕರು ಗೈರಾಗಿದ್ದರು. ಇಷ್ಟೆಲ್ಲಾ ಒತ್ತಡ ಇದ್ದರೂ ಬಿರೇನ್ ಸಿಂಗ್ ಅವರ ರಾಜೀನಾಮೆ ಪಡೆಯಲು ಬಿಜೆಪಿ ವರಿಷ್ಠರು ಮುಂದಾಗಿರಲಿಲ್ಲ.
ಈಗಲೇ ಏಕೆ ರಾಜೀನಾಮೆ: ಫೆ.10ರಂದು (ಸೋಮವಾರ) ಮಣಿಪುರದಲ್ಲಿ ಬಜೆಟ್ ಅಧಿವೇಶನ ಆರಂಭಗೊಳ್ಳಲಿದೆ. ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವಾಗಿ ಕಾಂಗ್ರೆಸ್ ಘೋಷಿಸಿತು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಬಿರೇನ್ ಸಿಂಗ್ ಅವರು ಶನಿವಾರ ಕರೆದಿದ್ದ ಸಭೆಗೆ ಹಲವು ಬಿಜೆಪಿ ಶಾಸಕರು ಗೈರಾಗಿದ್ದರು. ಒಂದು ವೇಳೆ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದರೆ, ಸರ್ಕಾರ ಪತನವಾಗುವ ಸಂಭವವಿತ್ತು.
ಶನಿವಾರವಷ್ಟೆ ಬಿಜೆಪಿಯು ದೆಹಲಿಯಲ್ಲಿ ಭಾರಿ ಗೆಲವು ಸಾಧಿಸಿದೆ. ಈ ಗೆಲುವಿನ ಮಧ್ಯೆ ಮಣಿಪುರದಲ್ಲಿ ಸರ್ಕಾರ ಪತನವಾಗುವ ಸುದ್ದಿಯು ಪಕ್ಷಕ್ಕೆ ನಕಾರಾತ್ಮಕವಾಗಲಿದೆ ಎಂದು ಬಿಜೆಪಿ ವರಿಷ್ಠ ಬಿರೇನ್ ಸಿಂಗ್ ಅವರಿಗೆ ರಾಜೀನಾಮೆ ನೀಡಲು ಸೂಚಿಸಿದರು ಎನ್ನಲಾಗುತ್ತಿದೆ. 2022ರಲ್ಲಿ ಬಿಜೆಪಿಯು ಮೊದಲ ಬಾರಿಗೆ ಮಣಿಪುರದಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿತ್ತು. ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.
ಬಹುಮತ ಕಳೆದುಕೊಳ್ಳುವ ಭೀತಿಯಲ್ಲಿ ಸರ್ಕಾರ 60;ಒಟ್ಟು ಸ್ಥಾನಗಳು 31;ಬಹುಮತಕ್ಕೆ ಬೇಕಾಗಿರುವ ಸ್ಥಾನಗಳು ––––––––– ಸರ್ಕಾರದ ಬಲಾಬಲ 37;ಬಿಜೆಪಿ 5;ನಾಗಾ ಪೀಪಲ್ಸ್ ಪಾರ್ಟಿ 7;ನ್ಯಾಷನಲ್ ಪೀಪಲ್ಸ್ ಪಾರ್ಟಿ 1;ಜೆಡಿಯು 3;ಸ್ವತಂತ್ರ ಅಭ್ಯರ್ಥಿಗಳು 5;ಕಾಂಗ್ರೆಸ್ 2;ಕುಕಿ ಪೀಪಲ್ಸ್ ಅಲಯನ್ಸ್ –––––– ಎನ್‌ಡಿಎ ಸರ್ಕಾರ ವಿರೋಧ ಪಕ್ಷಗಳು * ಚುನಾವಣೆಯಲ್ಲಿ ಬಿಜೆಪಿಯು ಒಟ್ಟು 32 ಸ್ಥಾನಗಳನ್ನು ಗೆದ್ಡುಕೊಂಡಿತ್ತು. ಸರ್ಕಾರ ರಚನೆಯ ಕೆಲವೇ ತಿಂಗಳ ಬಳಿಕ ಆರು ಜೆಡಿಯು ಶಾಸಕರ ಪೈಕಿ ಐವರು ಬಿಜೆಪಿ ಸೇರಿಕೊಂಡರು. ಅಲ್ಲಿಗೆ ಬಿಜೆಪಿಯ ಒಟ್ಟು ಶಾಸಕ ಸಂಖ್ಯೆ 37ಕ್ಕೆ ಏರಿತು * ಜನಾಂಗೀಯ ಸಂಘರ್ಷವನ್ನು ನಿಯಂತ್ರಿಸುವಲ್ಲಿ ಸರ್ಕಾರ ಸೋತಿದೆ ಎಂದು ಕಾರಣ ನೀಡಿ, ನ್ಯಾಷನಲ್ ಪೀಪಲ್ಸ್ ಪಾರ್ಟಿಯು ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ಕಳೆದ 2024ರ ನವೆಂಬರ್‌ನಲ್ಲಿ ವಾಪಸು ಪಡೆದುಕೊಂಡಿತು * ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರಿಕೊಂಡಿದ್ದರಿಂದ ಒಬ್ಬ ಜೆಡಿಯು ಶಾಸಕ ಕೂಡ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದರು –––––––––––––––– ಈಗಿನ ಬಲಾಬಲ 37;ಬಿಜೆಪಿ ಶಾಸಕರು (7;ಸಂಘರ್ಷದ ಬಳಿಕ ಬಿಜೆಪಿಯಿಂದ ದೂರ ಉಳಿದಿರುವ ಕುಕಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಬಿಜೆಪಿ ಶಾಸಕರ ಸಂಖ್ಯೆ 9-12;ಬಜೆಟ್ ಅಧಿವೇಶನದಲ್ಲಿ ಸರ್ಕಾರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುತ್ತೇವೆ ಎಂದು ಕಾಂಗ್ರೆಸ್ ಹೇಳಿತ್ತು. ಈ ಹಿನ್ನೆಲೆಯಲ್ಲಿ ಬಿರೇಸ್ ಸಿಂಗ್ ಅವರು ಬಿಜೆಪಿ ಶಾಸಕರ ಸಭೆ ಕರೆದಿದ್ದರು. ಈ ಸಭೆಗೆ ಗೈರಾಗಿದ್ದ ಬಿಜೆಪಿ ಶಾಸಕರು) 5;ನಾಗಾ ಪೀಪಲ್ಸ್ ಪಾರ್ಟಿ 3;ಸ್ವತಂತ್ರ್ಯ ಅಭ್ಯರ್ಥಿಗಳು 1;ಜೆಡಿಯು * ಒಂದು ವೇಳೆ 7 ಕುಕಿ ಬುಡಕಟ್ಟು ಸಮುದಾಯದ ಶಾಸಕರು ಹಾಗೂ ಸಭೆಗೆ ಹಾಜರಾಗದೇ ಇದ್ದ 9 ಶಾಸಕರು ಸರ್ಕಾರದಿಂದ ಹೊರಬಂದರೆ, ಸರ್ಕಾರವು ಬಹುಮತ ಕಳೆದುಕೊಳ್ಳುತ್ತಿತ್ತು * ರಾಜೀನಾಮೆ ನೀಡುವ ಸಂದರ್ಭ ಬಿರೇನ್ ಸಿಂಗ್ ಅವರ ಜೊತೆಯಲ್ಲಿ ಬಿಜೆಪಿ ಮತ್ತು ನಾಗಾ ಪೀಪಲ್ಸ್ ಪಾರ್ಟಿ ಸೇರಿ ಒಟ್ಟು 14 ಶಾಕಸರು ಇದ್ದರು –––
ಸಂದರ್ಭವನ್ನು ಅರಿತು ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. 2023ರರಿಂದಲೂ ನಾವು ಇದನ್ನೇ ಆಗ್ರಹಿಸುತ್ತಿದ್ದೆವು. ಅದರೂ ಇದು ಬಹಳ ತಡವಾಯಿತು. ಪದೇ ಪದೇ ವಿದೇಶಗಳಿಗೆ ಹಾರುವ ಪ್ರಧಾನಿ ಅವರಿಗೆ ಮಣಿಪುರಕ್ಕೆ ಭೇಟಿ ನೀಡಲು ಸಮಯವೂ ಇಲ್ಲ ಒಲವೂ ಇಲ್ಲ
–ಜೈರಾಮ್ ರಮೇಶ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ಬಿರೇನ್ ಸಿಂಗ್ ಸಲಹೆ ಕೇಂದ್ರ ಸರ್ಕಾರಕ್ಕೆ ಕೆಲವು ವಿಚಾರಗಳ ಬಗ್ಗೆ ನಾನು ವಿನಮ್ರವಾಗಿ ವಿನಂತಿಸಿಕೊಳ್ಳುತ್ತೇನೆ: * ಮಣಿಪುರಕ್ಕೆ ಸಾವಿರಾರು ವರ್ಷಗಳ ಶ್ರೀಮಂತ ಹಾಗೂ ನಾಗರಿಕತೆ ಇತಿಹಾಸವಿದೆ. ಇಂಥ ರಾಜ್ಯದ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡುವುದು * ರಾಜ್ಯದ ಗಡಿಯೊಳಗೆ ಅಕ್ರಮವಾಗಿ ನುಸುಳುವುದನ್ನು ತಡೆಯಬೇಕು. ಅಕ್ರಮ ವಲಸಿಗರನ್ನು ವಾಪಸು ಅವರ ದೇಶಕ್ಕೆ ಕಳುಹಿಸಲು ನೀತಿ ರೂಪಿಸಬೇಕು * ಮಾದಕವಸ್ತು ಮತ್ತು ಇದರ ಭಯೋತ್ಪಾದನೆಯ ವಿರುದ್ಧ ಹೋರಾಟವನ್ನು ಮುಂದುವರಿಸುವುದು * ಭಾರತ–ಮ್ಯಾನ್ಮಾರ್ ಗಡಿಗೆ ಆದಷ್ಟು ಬೇಗ ಬೇಲಿ ಹಾಕಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.