ಇಂಫಾಲ್ : ಮಣಿಪುರದ ನೋನಿ ಜಿಲ್ಲೆಯ ದೈವೈಜಾಂಗ್ ಗ್ರಾಮದಲ್ಲಿ ನಡೆದ ಆಂತರಿಕ ಘರ್ಷಣೆಯಲ್ಲಿ ಕುಕಿ ಬಂಡುಕೋರ ಸಂಘಟನೆಯ ಐವರು ಕಾರ್ಯಕರ್ತರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಜಿಲ್ಲಾ ಕೇಂದ್ರ ನೋನಿಯಿಂದ ಸುಮಾರು 53 ಕಿ.ಮೀ ದೂರದಲ್ಲಿರುವ ದೈವೈಜಾಂಗ್ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ.
ಕುಕಿ ಬಂಡುಕೋರ ಸಂಘಟನೆಯಾದ ಚಿನ್ ಕುಕಿ ಮಿಜೊ ಆರ್ಮಿಯ ಸಿಕೆಎಂಎ ಕಾರ್ಯಕರ್ತರ ನಡುವೆ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದೆ. ಐವರು ಕಾರ್ಯಕರ್ತರ ಹತ್ಯೆಗೆ ನಿಖರ ಕಾರಣವೇನು ಎಂಬುದನ್ನು ಇನ್ನೂ ಸ್ಪಷ್ಟಪಡಿಸಲಾಗಿಲ್ಲ. ಕೆಲವು ಆಂತರಿಕ ವಿವಾದಗಳು ಕಾರಣವಾಗಿರಬಹುದೆಂದು ಶಂಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಪ್ಪು ತಿಳುವಳಿಕೆ ಮತ್ತು ಕೆಲವು ದುರುದ್ದೇಶಗಳಿಂದಾಗಿ, ನಮ್ಮ ಐವರು ಕಾರ್ಯಕರ್ತರು ಕೊಲ್ಲಲ್ಪಟ್ಟರು. ಇದು ನಮ್ಮ ಸಂಘಟನೆ ಮತ್ತು ಸಮುದಾಯ ಎರಡಕ್ಕೂ ಆದ ನಷ್ಟ ಎಂದು ಸಿಕೆಎಂಎ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.