ಪ್ರಾತಿನಿಧಿಕ ಚಿತ್ರ
ಇಂಫಾಲ: ಮಣಿಪುರದ ನಿಷೇಧಿತ ಸಂಘಟನೆ ನ್ಯಾಷನಲ್ ರೆವಲ್ಯೂಷನರಿ ಫ್ರಂಟ್ ಆಫ್ ಮಣಿಪುರದ (ಎನ್‌ಆರ್‌ಎಫ್‌ಎಂ) ಅಡಗುತಾಣಗಳ ಮೇಲೆ ಭದ್ರತಾ ಪಡೆಗಳು ನಡೆಸಿದ ದಾಳಿಯಲ್ಲಿ ಏಳು ಮಂದಿ ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಪೂರ್ವ ಇಂಫಾಲ ಜಿಲ್ಲೆಯ ಟೆಲ್ಲೌ ಮಖಾ ಲೈಕೈ ಪ್ರದೇಶದಲ್ಲಿ ಉಗ್ರರನ್ನು ಬಂಧಿಸಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬಂಧಿತರಿಂದ ಎ1 ಅಸಾಲ್ಟ್ ರೈಫಲ್, ಎಕೆ-47 ರೈಫಲ್, ಎಸ್‌ಎನ್‌ಎಸ್‌ಎಎಸ್ ರೈಫಲ್‌ಗಳು ಎರಡು ಸ್ವಯಂ ಲೋಡಿಂಗ್ ರೈಫಲ್‌ಗಳು, ಐದು ಗುಂಡು ನಿರೋಧಕ ಜಾಕೆಟ್‌ಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.