ADVERTISEMENT

ಮಣಿಪುರ: ನಿಷೇಧಿತ ಸಂಘಟನೆಗಳಿಗೆ ಸೇರಿದ 8 ಮಂದಿ ಉಗ್ರರ ಬಂಧನ

ಪಿಟಿಐ
Published 4 ಆಗಸ್ಟ್ 2025, 5:30 IST
Last Updated 4 ಆಗಸ್ಟ್ 2025, 5:30 IST
   

ಇಂಫಾಲ (ಮಣಿಪುರ): ನಿಷೇಧಿತ ಸಂಘಟನೆಗಳಿಗೆ ಸೇರಿದ 8 ಮಂದಿ ಉಗ್ರರನ್ನು ಭದ್ರತಾ ಪಡೆಗಳು ಬಂಧಿಸಿವೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಇಂಫಾಲ ಪಶ್ಚಿಮ, ಪೂರ್ವ ಮತ್ತು ಬಿಷ್ಣುಪುರ ಜಿಲ್ಲೆಗಳ ವಿವಿಧ ಪ್ರದೇಶಗಳಿಂದ ಕೆಸಿಪಿ ಸೇರಿ, ವಿವಿಧ ನಿಷೇಧಿತ ಸಂಘಟನೆಗಳಿಗೆ ಸೇರಿದ ಒಟ್ಟು 8 ಮಂದಿ ಸಕ್ರಿಯ ಕಾರ್ಯಕರ್ತರನ್ನು ಭಾನುವಾರ ಬಂಧಿಸಲಾಗಿದೆ. ಅವರು ಸುಲಿಗೆ, ಗುಂಡಿನ ದಾಳಿ ಹಾಗೂ ಅಪಹರಣ ಪ್ರಕರಣಗಳಲ್ಲಿ ಭಾಗಿಯಾಗಿದ್ದರು.

ಬಂಧಿತರನ್ನು ಎಂ.ಪ್ರೇಮ್‌ಕುಮಾರ್ ಸಿಂಗ್ (28), ಯಂಬೆಮ್ ಶೀತಲ್ ಸಿಂಗ್ (39), ಸೊರೊಖೈಬಮ್ ಇನಾಟೊನ್ ಸಿಂಗ್ (38), ಖೊಂಗ್‌ಬಂಟಬಮ್ ಇನಾಚಾ ದೇವಿ (52), ಓಯಿನಮ್ ನವೋಬಾ ಸಿಂಗ್ (18), ಹೈಸ್ನಾಮ್ ಬೊಬೊ ಸಿಂಗ್ (37) ರೋಹಿತ್ ಮೈತೇಯಿ, ಮತ್ತು ನೆಪ್ರಮ್ ಹರಿ ಮೈತೇಯಿ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.