ADVERTISEMENT

ಮಣಿಪುರ: ಸುಲಿಗೆ ಆರೋಪದ ಮೇಲೆ ಇಬ್ಬರು ಬಂಡುಕೋರರ ಬಂಧನ

ಪಿಟಿಐ
Published 19 ಅಕ್ಟೋಬರ್ 2025, 13:33 IST
Last Updated 19 ಅಕ್ಟೋಬರ್ 2025, 13:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಂಫಾಲ್‌: ‘ಸುಲಿಗೆ ಆರೋಪದ ಮೇಲೆ ನಿಷೇಧಿತ ಬಂಡುಕೋರ ಸಂಘಟನೆಯ ಇಬ್ಬರು ಮಹಿಳಾ ಕಾರ್ಯಕರ್ತರನ್ನು ಮಣಿಪುರದಲ್ಲಿ ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಇಂಫಾಲ್‌ ಪಶ್ಚಿಮ ಜಿಲ್ಲೆಯ ಪಿಶು‍ಮ್‌ಒಯೈನಮ್‌ ಪ್ರದೇಶದಲ್ಲಿದ್ದ ಕಾಂಗ್ಲಿಪಾಕ್‌ ಕಮ್ಯುನಿಸ್ಟ್‌ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಮೈಕಮ್‌ ಬಸಂತ್‌ರಾಣಿ ದೇವಿ (42) ಅವರನ್ನು ಬಂಧಿಸಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಭೂವ್ಯಾಜ್ಯ, ಸಾಲ ಮರುಪಾವತಿ ವಿಚಾರದಲ್ಲಿ ಮಧ್ಯವರ್ತಿ ಕೆಲಸ ಮಾಡುವ ಮೂಲಕ ಸುಲಿಗೆ ನಡೆಸಿದ್ದರು.

ADVERTISEMENT

ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮೋಟರ್‌ ವಾಹನ ಇಲಾಖೆಯ ಅಧಿಕಾರಿಗಳು ಎಂದು ಬಿಂಬಿಸಿಕೊಂಡು ವಸೂಲಿಗೆ ಇಳಿದಿದ್ದ ಮತ್ತಿಬ್ಬರನ್ನು ಬಂಧಿಸಲಾಗಿದೆ. 

ಆರೋಪಿಗಳಾದ ಎಂ.ಡಿ. ಆನೀಶ್‌ ಇಕ್ಬಾಲ್‌, ಎಂ.ಡಿ. ಆಮೀರ್‌ ರಹಮಾನ್‌ ಅವರು ಬೀದಿ ಬದಿಯ ಗ್ಯಾಂಬ್ಲರ್‌ಗಳಿಂದ ಹಣ ಪಡೆಯುತ್ತಿದ್ದ ವೇಳೆ ಬಂಧಿಸಲಾಯಿತು. ಇಕ್ಬಾಲ್‌, ಮೋಟರ್‌ ವಾಹನ  ಸಾರಿಗೆ ಇಲಾಖೆ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ ಪರೀಕ್ಷೆ ಬರೆದಿದ್ದು, ವೇಯ್ಟಿಂಗ್‌ ಲಿಸ್ಟ್‌ನಲ್ಲಿದ್ದ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.