ADVERTISEMENT

ಮಣಿಪುರ | ಆರ್‌ಎಸ್‌ಎಸ್‌ ಬಿಕ್ಕಟ್ಟು ಪರಿಹರಿಸುವುದಿಲ್ಲ: ಕೇಶಮ್ ಮೇಘಚಂದ್ರ

ಪಿಟಿಐ
Published 21 ನವೆಂಬರ್ 2025, 15:55 IST
Last Updated 21 ನವೆಂಬರ್ 2025, 15:55 IST
<div class="paragraphs"><p>ಆರ್‌ಎಸ್‌ಎಸ್‌</p></div>

ಆರ್‌ಎಸ್‌ಎಸ್‌

   

(ಪ್ರಾತಿನಿಧಿಕ ಚಿತ್ರ)

ಇಂಫಾಲ: ‘ಆರ್‌ಎಸ್‌ಎಸ್‌ ಒಳಗೊಳ್ಳುವಿಕೆಯಿಂದ ಮಣಿಪುರದ ಬಿಕ್ಕಟ್ಟು ಪರಿಹಾರವಾಗುವುದಿಲ್ಲ. ಅದಕ್ಕಾಗಿ ಸರ್ಕಾರದ ನೇತೃತ್ವದ ರಾಜಕೀಯ ಪರಿಹಾರ ಆಡಳಿತಾತ್ಮಕ ಹೊಣೆಗಾರಿಕೆ ಮತ್ತು ವಿಶ್ವಾಸ ವೃದ್ಧಿಯ ಕ್ರಮಗಳು ಅಗತ್ಯ’ ಎಂದು ಮಣಿಪುರ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಕೇಶಮ್ ಮೇಘಚಂದ್ರ ಸಿಂಗ್ ಹೇಳಿದ್ದಾರೆ.

ADVERTISEMENT

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ಮೂರು ದಿನಗಳ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ‘ಜನರ ಸಂಕಷ್ಟಕ್ಕಿಂತ ಸಾಂಸ್ಥಿಕ ಬೆಳವಣಿಗೆಯನ್ನು ಬಲಪಡಿಸಲು ಆದ್ಯತೆ ನೀಡುವ ಯಾವುದೇ ಭೇಟಿಯು ತಪ್ಪು ಸಂದೇಶವನ್ನು ರವಾನಿಸುತ್ತದೆ’ ಎಂದು ‘ಎಕ್ಸ್‌’ನಲ್ಲಿ ಶುಕ್ರವಾರ ಮಾಡಿರುವ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

‘ಮಣಿಪುರ ಹಿಂಸಾಚಾರ ಸ್ಥಳಾಂತರ ಸಾಮಾಜಿಕ ವಿಭಜನೆ ಮತ್ತು ಆಡಳಿತಾತ್ಮಕ ವೈಫಲ್ಯದಿಂದ ಬಳಲುತ್ತಿರುವ ಸಮಯದಲ್ಲಿ ಕೇಂದ್ರ ಸರ್ಕಾರವು ಶಾಂತಿ ಮತ್ತು ಸಹಜ ಸ್ಥಿತಿಯ ಮರುಸ್ಥಾಪನೆಗಾಗಿ ನಿರ್ದಿಷ್ಟ ಕಾರ್ಯಯೋಜನೆಯನ್ನು ಕಳುಹಿಸುತ್ತದೆ ಎಂದು ಜನರು ನಿರೀಕ್ಷಿಸಿದ್ದರು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.