ADVERTISEMENT

ಸಿಸೋಡಿಯಾ ಶಾಸಕರ ಕಚೇರಿಯಲ್ಲಿ AC, TV, ಕುರ್ಚಿಗಳನ್ನು ಕದ್ದಿದ್ದಾರೆ: BJP ಶಾಸಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2025, 10:41 IST
Last Updated 18 ಫೆಬ್ರುವರಿ 2025, 10:41 IST
<div class="paragraphs"><p>ಮನೀಶ್ ಸಿಸೋಡಿಯಾ ಮತ್ತು&nbsp;ರವೀಂದರ್ ಸಿಂಗ್ ನೇಗಿ</p></div>

ಮನೀಶ್ ಸಿಸೋಡಿಯಾ ಮತ್ತು ರವೀಂದರ್ ಸಿಂಗ್ ನೇಗಿ

   

ನವದೆಹಲಿ: ದೆಹಲಿ ಮಾಜಿ ಉಪಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಅವರು ಶಾಸಕರ ಕಚೇರಿಯಲ್ಲಿದ್ದ ಸರ್ಕಾರಿ ವಸ್ತುಗಳನ್ನು ಕದ್ದಿದ್ದಾರೆ ಎಂದು ಪಟ್ಟರ್‌ಗಂಜ್‌ನ ಬಿಜೆಪಿ ಶಾಸಕ ರವೀಂದರ್ ಸಿಂಗ್ ನೇಗಿ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿಸೋಡಿಯಾ ಅವರು ಶಾಸಕರ ಕಚೇರಿಯಲ್ಲಿದ್ದ ಎಸಿ, ಟಿವಿ, ಕುರ್ಚಿ, ಫ್ಯಾನ್‌, ಎಲ್‌ಇಡಿಗಳು ಸೇರಿದಂತೆ ಇತರೆ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಹೋಗಿದ್ದಾರೆ’ ಎಂದು ಹೇಳಿದ್ದಾರೆ.

ADVERTISEMENT

‘ಪಟ್ಪರ್‌ಗಂಜ್‌ ಕ್ಷೇತ್ರದ ಮಾಜಿ ಶಾಸಕ ಮನೀಶ್ ಸಿಸೋಡಿಯಾ ಅವರು ಚುನಾವಣೆಗೂ ಮುನ್ನವೇ ತಮ್ಮ ನಿಜ ಮುಖವನ್ನು ತೋರಿಸಿದ್ದರು. ಇದೀಗ ಶಾಸಕರ ಕಚೇರಿಯಲ್ಲಿದ್ದ ಎಸಿ, ಟಿವಿ, ಕುರ್ಚಿ, ಫ್ಯಾನ್ ಕಳ್ಳತನವಾಗಿದೆ. ಸಿಸೋಡಿಯಾ ಅವರು ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂಬುದಕ್ಕೆ ಇದುವೇ ಸಾಕ್ಷಿ. ಕಳ್ಳತನ ಮಾಡುವುದರಲ್ಲೂ ಪರಿಣತರಾಗಿದ್ದಾರೆ’ ಎಂದು ನೇಗಿ ‘ಎಕ್ಸ್‌’ನಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಎಎಪಿ ಸ್ಪಷ್ಟನೆ: ಶಾಸಕರ ಕಚೇರಿಯಿಂದ ಯಾವುದೇ ಸರ್ಕಾರಿ ವಸ್ತುಗಳನ್ನು ತೆಗೆದುಕೊಂಡು ಹೋಗಿಲ್ಲ. 2 ಎಸಿಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಈಗ ಅವುಗಳನ್ನು ಅಂಗಡಿ ಮಾಲೀಕರಿಗೆ ಹಿಂದಿರುಗಿಸಿದ್ದೇವೆ ಎಂದು ಸಿಸೋಡಿಯಾ ಅವರ ಪ್ರತಿನಿಧಿ ವೇದ್ ಪ್ರಕಾಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.