ADVERTISEMENT

BJPಯನ್ನು ಸೋಲಿಸಲು ‘ಇಂಡಿಯಾ’ ಒಗ್ಗಟ್ಟಾಗಿ ಮುನ್ನಡೆಯಬೇಕು: ಮಣಿಶಂಕರ್‌ ಅಯ್ಯರ್‌

ಪಿಟಿಐ
Published 10 ಸೆಪ್ಟೆಂಬರ್ 2025, 13:38 IST
Last Updated 10 ಸೆಪ್ಟೆಂಬರ್ 2025, 13:38 IST
ಮಣಿಶಂಕರ್‌ ಅಯ್ಯರ್‌
ಮಣಿಶಂಕರ್‌ ಅಯ್ಯರ್‌   

ನವದೆಹಲಿ: ಇಂಡಿಯಾ ಮೈತ್ರಿಕೂಟವು ಒಗ್ಗಟ್ಟಾಗಿ ಮುನ್ನಡೆದರೆ, ಪರಿಣಾಮಕಾರಿಯಾಗಿ ಸಂಘಟಿತವಾದರೆ ದೇಶದ ಪ್ರಜಾಪ್ರಭುತ್ವದ ಭೀಕರ ಅವನತಿಯನ್ನು ತಡೆಯಬಹುದು ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಣಿಶಂಕರ್‌ ಅಯ್ಯರ್‌ ಅವರು ಹೇಳಿದರು.

‘ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ‘ಇಂಡಿಯಾ’ಕ್ಕೆ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘2014, 2019 ಮತ್ತು 2024ರ ಚುನಾವಣೆಗಳಲ್ಲಿ ಬಿಜೆಪಿ ಒಟ್ಟು ಮತಗಳ ಕೇವಲ ಮೂರನೇ ಒಂದು ಭಾಗದಷ್ಟನ್ನು ಪಡೆದುಕೊಂಡಿದೆ. ಮೂರನೇ ಎರಡರಷ್ಟು ಜನರು ಬಿಜೆಪಿಗೆ ಮತ ಹಾಕಿಲ್ಲ’ ಎಂದರು.

ADVERTISEMENT

‘ಇದರ ಅರ್ಥ ಏನೆಂದರೆ, ಹಿಂದುತ್ವ ಮತ್ತು ಅದರ ಸಿದ್ಧಾಂತವು ಧರ್ಮ ಮತ್ತು ಜೀವನಪದ್ಧತಿ ಎನ್ನುವ ರಾಜಕೀಯ ಯೋಚನೆಗಳನ್ನು ಅರ್ಧದಷ್ಟು ಹಿಂದೂಗಳು ನಿರಾಕರಿಸಿದ್ದಾರೆ. ಹಾಗಾಗಿ ‘ಇಂಡಿಯಾ’ ಗೆಲ್ಲಬಹುದು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.