ADVERTISEMENT

ಉತ್ತರ ಪ್ರದೇಶ: ಪತಿಯನ್ನು ಮರಕ್ಕೆ ಕಟ್ಟಿ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರ

ಪಿಟಿಐ
Published 25 ಮಾರ್ಚ್ 2022, 10:48 IST
Last Updated 25 ಮಾರ್ಚ್ 2022, 10:48 IST
   

ಮುಜಾಫರ್‌ನಗರ (ಉತ್ತರ ಪ್ರದೇಶ): ಕಿಡಿಗೇಡಿಗಳ ಗುಂಪೊಂದು ವ್ಯಕ್ತಿಯೊಬ್ಬರನ್ನು ಮರಕ್ಕೆ ಕಟ್ಟಿ ಹಾಕಿ, ಅವರ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನುಷ ಕೃತ್ಯ ಜಿಲ್ಲೆಯಲ್ಲಿ ನಡೆದಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಸಂತ್ರಸ್ತರ ಕುಟುಂಬ ಈ ಸಂಬಂಧ ನ್ಯೂ ಮಂಡಿ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದೆ.

ವ್ಯಕ್ತಿಯು ಹೆಂಡತಿಯೊಂದಿಗೆ ಸಂಬಂಧಿಕರ ಮನೆಯಿಂದಬುಧವಾರ ರಾತ್ರಿ ತಮ್ಮ ಹಳ್ಳಿಗೆ ತೆರಳುತ್ತಿದ್ದರು. ಈ ವೇಳೆ ದಂಪತಿಯನ್ನು ಸುತ್ತುವರಿದ 10 ಜನರ ಗುಂಪು, ಹತ್ತಿರದಲ್ಲೇ ಇದ್ದ ಮಾವಿನ ತೋಪಿಗೆ ಅವರನ್ನು ಎಳೆದೊಯ್ದಿದೆ. ನಂತರ ವ್ಯಕ್ತಿಯನ್ನು (ಪತಿಯನ್ನು) ಮರಕ್ಕೆ ಕಟ್ಟಲಾಗಿದೆ. ಗುಂಪಿನಲ್ಲಿದ್ದ ನಾಲ್ವರು, ಉಳಿದವರ ಎದುರೇ ಮಹಿಳೆಯ ಮೇಲೆ ಅತ್ಯಾಚಾರವೆಸಗಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಸದ್ಯ ಇಬ್ಬರು ಅಪ್ರಾಪ್ತರು ಸೇರಿದಂತೆ ಒಟ್ಟು 10 ಆರೋಪಿಗಳನ್ನೂ ಬಂಧಿಸಲಾಗಿದೆ ಎಂದು ಮಜಾಫರ್‌ನಗರ ಎಸ್‌ಪಿ(ನಗರ) ಅರ್ಪಿತ್ ವಿಜಯವರ್ಗಿಯ ಹೇಳಿದ್ದಾರೆ.

ಮಹಿಳೆಯನ್ನು ವೈದ್ಯಕೀಯ ಪರೀಕ್ಷೆ ಕಳುಹಿಸಲಾಗಿದ್ದು, ಅಪರಾಧ ದಂಡ ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್‌ 164ರ ಅಡಿಯಲ್ಲಿಮ್ಯಾಜಿಸ್ಟ್ರೇಟ್‌ ಎದುರು ಶೀಘ್ರದಲ್ಲೇ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಠಾಣಾಧಿಕಾರಿ ಪಂಕಜ್ ಪಂತ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.