ADVERTISEMENT

ವಿಧ್ವಂಸಕ ಕೃತ್ಯ ಎಸಗಿದ ಆರೋಪ: ಸಂಸದ ಚಂದ್ರಶೇಖರ್ ಆಜಾದ್ ಬೆಂಬಲಿಗರ ಬಂಧನ

ಪಿಟಿಐ
Published 1 ಜುಲೈ 2025, 2:11 IST
Last Updated 1 ಜುಲೈ 2025, 2:11 IST
<div class="paragraphs"><p>ಚಂದ್ರಶೇಖರ್ ಆಜಾದ್ </p></div>

ಚಂದ್ರಶೇಖರ್ ಆಜಾದ್

   

ಪ್ರಯಾಗ್‌ರಾಜ್: ಭದೇಯೋರಾ ಬಜಾರ್‌ನಲ್ಲಿ ನಡೆದ ವಿಧ್ವಂಸಕ ಕೃತ್ಯ ಮತ್ತು ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 8 ಬಾಲಾಪರಾಧಿ ಮತ್ತು 67 ಜನರನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶದ ನಾಗಿನಾ ಲೋಕಸಭಾ ಕ್ಷೇತ್ರದ ಸಂಸದ ಚಂದ್ರಶೇಖರ್‌ ಆಜಾದ್ ಅವರು ಕರಚನಾ ತಹಸಿಲ್‌ನ ಇಸೋಹ್ತಾ ಗ್ರಾಮಕ್ಕೆ ಭೇಟಿ ನೀಡುತ್ತಿದ್ದ ಅವರನ್ನು ಪೊಲೀಸರು ತಡೆದ ನಂತರ ಹಿಂಸಾಚಾರ ಭುಗಿಲೆದ್ದಿತ್ತು.

ADVERTISEMENT

ಬಂಧಿತ ಆರೋಪಿಗಳ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಮತ್ತು ಗ್ಯಾಂಗ್‌ಸ್ಟರ್ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಯಮುನಾಪರ್ ಡಿಸಿಪಿ ವಿವೇಕ್ ಚಂದ್ರ ಯಾದವ್ ತಿಳಿಸಿದ್ದಾರೆ.

ಕಾನೂನು ನಿಬಂಧನೆಗಳ ಪ್ರಕಾರ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದವರಿಂದಲೇ ಪರಿಹಾರ ವಸೂಲಿ ಮಾಡಲಾಗುವುದು. ಜತೆಗೆ, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಲಾಗುವುದು ಎಂದು ಅವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಎಂಟು ಬಾಲಾಪರಾಧಿಗಳು ಮತ್ತು 67 ಜನರನ್ನು ಬಂಧಿಸಲಾಗಿದೆ. ಸಂಸದರ ಯೋಜಿತ ಭೇಟಿಯ ಬಗ್ಗೆ ತಿಳಿದು ಆಜಾದ್ ಅವರ ಪಕ್ಷದ ಕಾರ್ಯಕರ್ತರು ಇಸೋಹ್ತಾ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಆದರೆ, ಆಜಾದ್ ಅವರು ಬರುವುದಿಲ್ಲ ಎಂದು ತಿಳಿದಾಗ ಕಾರ್ಯಕರ್ತರು ಉದ್ರಿಕ್ತರಾಗಿ ಕಲ್ಲು ತೂರಾಟ ನಡೆಸಿ ಆಸ್ತಿಪಾಸ್ತಿಗೆ ಹಾನಿ ಮಾಡಿದ್ದಾರೆ ಎಂದು ಯಾದವ್ ವಿವರಿಸಿದ್ದಾರೆ.

ಏಪ್ರಿಲ್ 13ರಂದು ಇಸೋಹ್ತಾ ಗ್ರಾಮದ ದೇವಿಶಂಕರ್ ಎಂಬ ವ್ಯಕ್ತಿ ಸುಟ್ಟ ಗಾಯಗಳಿಂದ ಮೃತಪಟ್ಟದ್ದರು. ದೇವಿಶಂಕರ್‌ನನ್ನು ಕೊಲೆ ಮಾಡಲಾಗಿದೆ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು.

ಕುಟುಂಬಸ್ಥರನ್ನು ಭೇಟಿ ಮಾಡಲು ಪ್ರಯಾಗ್‌ರಾಜ್‌ನಲ್ಲಿರುವ ಸರ್ಕ್ಯೂಟ್ ಹೌಸ್ ತಲುಪಿದ್ದ ಚಂದ್ರಶೇಖರ್ ಆಜಾದ್ ಅವರನ್ನು ಭದ್ರತಾ ನಿಯಮಗಳನ್ನು ಉಲ್ಲೇಖಿಸಿ ಗ್ರಾಮಕ್ಕೆ ಹೋಗದಂತೆ ಪೊಲೀಸರು ತಡೆದಿದ್ದರು.

ಚಂದ್ರಶೇಖರ್ ಆಜಾದ್ ಬೆಂಬಲಿಗರು ಪೊಲೀಸ್ ವಾಹನವನ್ನು ಧ್ವಂಸಗೊಳಿಸುತ್ತಿರುವ ದೃಶ್ಯ

ಉದ್ರಿಕ್ತರ ಗುಂಪು ಪೊಲೀಸ್ ವಾಹನವನ್ನು ಧ್ವಂಸಗೊಳಿಸಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.