ADVERTISEMENT

ಕೇರಳದ ವಯನಾಡಿನಲ್ಲಿ ಎನ್‌ಕೌಂಟರ್: ಶಂಕಿತ ಮಾವೊವಾದಿ ಹತ್ಯೆ

ಥಂಡರ್‌ಬೋಲ್ಟ್‌ ಕಮಾಂಡೊ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 8:21 IST
Last Updated 3 ನವೆಂಬರ್ 2020, 8:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತಪುರ: ಕೇರಳದವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ ಕೇರಳ ಪೊಲೀಸ್ ಪಡೆಯ ಥಂಡರ್‌ಬೋಲ್ಟ್ ಕಮಾಂಡೊ ನಡೆಸಿದ ಎನ್‌ಕೌಂಟರ್‌ನಲ್ಲಿ ಒಬ್ಬ ಶಂಕಿತ ಮಾವೊವಾದಿ ಮೃತಪಟ್ಟಿದ್ದಾನೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಬೆಳಿಗ್ಗೆ 6 ಗಂಟೆಗೆ ಈ ಎನ್‌ಕೌಂಟರ್ ನಡೆದಿದೆ. ಬಣಾಸುರಮಲೆಬಳಿಯ ಅರಣ್ಯ ಪ್ರದೇಶದಲ್ಲಿ ಥಂಡರ್‌ಬೋಲ್ಟ್‌ ಕಮಾಂಡೊಗಳು ವಾಡಿಕೆಯಂತೆ ಗಸ್ತು ತಿರುಗುತ್ತಿದ್ದ ವೇಳೆಮೂವರು ಶಂಕಿತ ಮಾವೊವಾದಿಗಳನ್ನು ಗುರುತಿಸಿದ್ದಾರೆ.

ಕಮಾಂಡೊಗಳು ಮತ್ತು ಶಂಕಿತ ಮಾವೊವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ, ಒಬ್ಬ ವ್ಯಕ್ತಿ ಸತ್ತು, ಇಬ್ಬರು ಪರಾರಿಯಾಗಿದ್ದಾರೆ. ಘಟನಾ ಸ್ಥಳದಿಂದ ಕೆಲವು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ತಿಳಿದುಬಂದಿಲ್ಲ. ಆದರೆ ಮೃತ ವ್ಯಕ್ತಿ ಮಲಯಾಳಿಯಲ್ಲ ಎಂದು ಶಂಕಿಸಲಾಗಿದೆ.

ADVERTISEMENT

ಘಟನಾ ಸ್ಥಳಕ್ಕೆ ಧಾವಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು ಅರಣ್ಯಪ್ರದೇಶದಲ್ಲಿ ‘ಕೂಂಬಿಂಗ್‌‘ ಕಾರ್ಯಾಚರಣೆ ನಡೆಸಿದ್ದಾರೆ.

ಕಳೆದ ವರ್ಷ ವಯನಾಡಿನ ವೈತಿರಿ ಬಳಿಯ ಲಕ್ಕಿಡಿಯ ರೆಸಾರ್ಟ್‌ನಲ್ಲಿ ಮಾವೋವಾದಿ ಸ್ಥಳೀಯ ಮುಖಂಡ ಸಿ ಪಿ ಜಲೀಲ್‌ನನ್ನು ಹತ್ಯೆ ಮಾಡಲಾಗಿದ್ದು, ಅದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಲಾಗಿತ್ತು. ಅದಾದ ನಂತರ ಈ ಹೊಸ ‘ಎನ್‌ಕೌಂಟರ್‌‘ ನಡೆದಿದೆ.

ಕಳೆದ ವರ್ಷ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲೂ ಒಬ್ಬ ಮಹಿಳೆ ಸೇರಿದಂತೆ ಮೂವರು ಮಾವೊವಾದಿಗಳು ಸಾವನ್ನಪ್ಪಿದ್ದರು.

ಏತನ್ಮಧ್ಯೆ, ಮಂಗಳವಾರ ನಡೆದ ಈ ಘಟನೆ ಕೆಲವು ಅನುಮಾನಗಳನ್ನು ಹುಟ್ಟುಹಾಕಿದ್ದು, ಇದೊಂದು ‘ನಕಲಿ ಎನ್‌ಕೌಂಟರ್‌‘ ಎಂದು ಕಾಂಗ್ರೆಸ್ ಆರೋಪಿಸಿದೆ. ಪಿಣರಾಯಿ ವಿಜಯನ್ ಸರ್ಕಾರವು ಮಾವೋವಾದಿಗಳನ್ನು ಕೊಲ್ಲುತ್ತಿದೆ ಎಂದು ಆರೋಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.