ADVERTISEMENT

ಮಥುರಾ: ಭಕ್ತರು ನೀಡಿದ್ದ ದೇಣಿಗೆ ಹಣದೊಂದಿಗೆ ಪರಾರಿಯಾದ ಇಸ್ಕಾನ್‌ ಸಿಬ್ಬಂದಿ

ಪಿಟಿಐ
Published 5 ಜನವರಿ 2025, 2:22 IST
Last Updated 5 ಜನವರಿ 2025, 2:22 IST
<div class="paragraphs"><p>ಇಸ್ಕಾನ್‌ ದೇವಸ್ಥಾನ</p></div>

ಇಸ್ಕಾನ್‌ ದೇವಸ್ಥಾನ

   

ಮಥುರಾ: ಭಕ್ತರು ದೇಣಿಗೆಯಾಗಿ ನೀಡಿದ್ದ ಲಕ್ಷಾಂತರ ಹಣ ಮತ್ತು ರಸೀದಿ ಪುಸ್ತಕದೊಂದಿಗೆ ಮಥುರಾದ ಇಸ್ಕಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಘಟನೆಯ ಕುರಿತು ಶುಕ್ರವಾರ ತಡರಾತ್ರಿ ದೇವಸ್ಥಾನದ ಮುಖ್ಯ ಹಣಕಾಸು ಅಧಿಕಾರಿ ವಿಶ್ವ ನಾಮ ದಾಸ್ ಅವರು ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಕುಮಾರ್ ತಿಳಿಸಿದ್ದಾರೆ.

ADVERTISEMENT

ದಾಸ್ ಅವರು ಡಿ. 27 ರಂದು ಕಳ್ಳತನದ ಬಗ್ಗೆ ಮಾಹಿತಿ ನೀಡಿದ್ದು, ಪ್ರಾಥಮಿಕ ತನಿಖೆ ನಡೆಸಿ ಎಫ್‌ಐಆರ್‌ ದಾಖಲಿಸಲಾಗಿದೆ. ಹಣದ ಜತೆಗೆ 32 ಹಾಳೆಗಳಿದ್ದ ರಸೀದಿ ಪುಸ್ತಕದೊಂದಿಗೆ ಪರಾರಿಯಾಗಿದ್ದಾನೆ ತನಿಖೆಯ ಬಳಿಕ ಎಷ್ಟು ಹಣ ಕೊಂಡೊಯ್ದಿದ್ದಾರೆ ಎನ್ನುವುದು ತಿಳಿದುಬರಲಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.