ADVERTISEMENT

ಟ್ರಂಪ್ ಹೇಳಿಕೆಗೆ ಮೌನಿ ಬಾಬಾ ಆಗುವ ಮೋದಿ: ಜೈರಾಮ್‌ ರಮೇಶ್‌

ಪಿಟಿಐ
Published 18 ಅಕ್ಟೋಬರ್ 2025, 13:39 IST
Last Updated 18 ಅಕ್ಟೋಬರ್ 2025, 13:39 IST
ಜೈರಾಮ್‌ ರಮೇಶ್‌
ಜೈರಾಮ್‌ ರಮೇಶ್‌   

ನವದೆಹಲಿ: ‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಯಾವಾಗೆಲ್ಲಾ ‘ಆಪರೇಷನ್‌ ಸಿಂಧೂರ’ ಸಂಘರ್ಷ ನಿಲ್ಲಿಸಿದೆ ಎನ್ನುತ್ತಾರೊ, ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವ ವಿಚಾರ ಪ್ರಸ್ತಾಪಿಸುತ್ತಾರೊ ಆವಾಗೆಲ್ಲಾ ಪ್ರಧಾನಿ ಮೋದಿ ಅವರು ‘ಮೌನಿ ಬಾಬಾ’ ಆಗುತ್ತಾರೆ’ ಎಂದು ಕಾಂಗ್ರೆಸ್‌ ಶನಿವಾರ ವ್ಯಂಗ್ಯವಾಡಿದೆ. 

ಈ ಬಗ್ಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಅವರು ‘ಎಕ್ಸ್‌’ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ಭಾರತವು ರಷ್ಯಾದಿಂದ ತೈಲ ಖರೀದಿ ಮಾಡುವುದನ್ನು ನಿಲ್ಲಿಸುತ್ತದೆ ಎಂದು ನನ್ನ ಸ್ನೇಹಿತ ನನಗೆ ಭರವಸೆ ನೀಡಿದ್ದಾರೆಂದು ಟ್ರಂಪ್‌ ಮತ್ತೊಮ್ಮೆ ಹೇಳಿದ್ದಾರೆ’ ಎಂದರು.

‘ಅಂದಹಾಗೆ, ನಾವು ಚೀನಾಗೆ ರಫ್ತು ಮಾಡುವುದಕ್ಕಿಂತ ಆ ದೇಶದಿಂದ ಆಮದು ಮಾಡಿಕೊಳ್ಳುವುದೇ ಹೆಚ್ಚಾಗಿದೆ. ಚೀನಾ ಜೊತೆಗಿನ ನಮ್ಮ ವ್ಯಾಪಾರ ಕೊರತೆಯು 2024ರ ಏಪ್ರಿಲ್‌–ಸೆಪ್ಟೆಂಬರ್‌ ಮಧ್ಯೆ 49.6 ಬಿಲಿಯನ್‌ ಡಾಲರ್‌ (ಸುಮಾರು ₹4.36 ಲಕ್ಷ ಕೋಟಿ) ಇತ್ತು. ಅದು 2025ರ ಏಪ್ರಿಲ್‌–ಸಪ್ಟೆಂಬರ್‌ ಮಧ್ಯೆ 54.4 ಬಿಲಿಯನ್‌ ಡಾಲರ್‌ಗೆ (ಸುಮಾರು ₹4.78 ಲಕ್ಷ ಕೋಟಿ) ಏರಿಕೆಯಾಗಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.