ADVERTISEMENT

ಹನುಮ ಜಯಂತಿ | ಕೋವಿಡ್‌ ವಿರುದ್ಧ ಹೋರಾಡಲು ಆಂಜನೇಯ ಶಕ್ತಿ ನೀಡಲಿ: ನರೇಂದ್ರ ಮೋದಿ

ಪಿಟಿಐ
Published 27 ಏಪ್ರಿಲ್ 2021, 5:40 IST
Last Updated 27 ಏಪ್ರಿಲ್ 2021, 5:40 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: ‘ಆಂಜನೇಯ ದೇವರ ಆಶೀರ್ವಾದ ಸದಾ ನಮ್ಮೆಲ್ಲರ ಮೇಲಿರಲಿ. ಕೋವಿಡ್‌ ಪಿಡುಗಿನ ವಿರುದ್ಧ ಹೋರಾಡಲು ನಮಗೆ ಶಕ್ತಿ ನೀಡಲಿ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರ್ಥಿಸಿದ್ದಾರೆ.

ದೇಶದ ಜನತೆಗೆ ಹನುಮ ಜಯಂತಿಯ ಶುಭ ಕೋರಿರುವ ಅವರು, ‘ಈ ಶುಭ ಸಂದರ್ಭದಲ್ಲಿ ನಾವು ಆಂಜನೇಯನ ಸಹಾನುಭೂತಿ ಮತ್ತು ಸಮರ್ಪಣಾ ಮನೋಭಾವವನ್ನು ನೆನಪಿಸಿಕೊಳ್ಳೋಣ. ಕೋವಿಡ್‌ ವಿರುದ್ಧ ಹೋರಾಡಲು ಅವರು ನಮಗೆ ಶಕ್ತಿ ನೀಡಲಿ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.