ADVERTISEMENT

ಸೋದರಳಿಯ ಆಕಾಶ್ ಆನಂದ್ ಮಾವನನ್ನು ಪಕ್ಷದಿಂದ ಉಚ್ಛಾಟಿಸಿದ ಮಾಯಾವತಿ

ಪಿಟಿಐ
Published 12 ಫೆಬ್ರುವರಿ 2025, 11:14 IST
Last Updated 12 ಫೆಬ್ರುವರಿ 2025, 11:14 IST
ಮಾಯಾವತಿ– ಪಿಟಿಐ ಚಿತ್ರ
ಮಾಯಾವತಿ– ಪಿಟಿಐ ಚಿತ್ರ   

ಲಖನೌ: ಗುಂಪುಗಾರಿಕೆ ಮತ್ತು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಆರೋಪದ ಮೇಲೆ ಸೋದರಳಿಯ ಆಕಾಶ್‌ ಆನಂದ್‌ ಅವರ ಮಾವ ಅಶೋಕ್‌ ಸಿದ್ದಾರ್ಥ್‌ ಅವರನ್ನು ಬಹುಜನ ಸಮಾಜವಾದಿ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಪಕ್ಷದಿಂದ ಉಚ್ಛಾಟಿಸಿದ್ದಾರೆ.

ಆಕಾಶ್ ಆನಂದ್ ಅವರು ಬಿಎಸ್‌ಪಿ ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿದ್ದು, ಮಾಯಾವತಿ ಅವರ ಉತ್ತರಾಧಿಕಾರಿಯಾಗಿದ್ದಾರೆ.

ಸಿದ್ದಾರ್ಥ್‌ ಅವರೊಂದಿಗೆ ಬಿಎಸ್‌ಪಿಯ ಮೀರತ್‌ ಜಿಲ್ಲಾ ಉಸ್ತುವಾರಿ ನಿತಿನ್‌ ಸಿಂಗ್ ಅವರನ್ನೂ ಉಚ್ಛಾಟಿಸಿದ್ದಾರೆ. ಸಿಂಗ್ ಅವರು ದಕ್ಷಿಣ ರಾಜ್ಯಗಳಲ್ಲಿ ಪಕ್ಷದ ಕಾರ್ಯ ಚಟುವಟಿಕೆಯ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದರು.

ADVERTISEMENT

ಈ ಬಗ್ಗೆ ಎಕ್ಸ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಮಾಯಾವತಿ, ‘ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಮಾಜಿ ರಾಜ್ಯಸಭಾ ಸಂಸದ ಡಾ. ಅಶೋಕ್ ಸಿದ್ದಾರ್ಥ್ ಮತ್ತು ನಿತಿನ್‌ ಸಿಂಗ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ’ ಎಂದಿದ್ದಾರೆ.

ಇತ್ತೀಚೆಗೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಪಿಯು ಕಳಪೆ ಪ್ರದರ್ಶನ ನೀಡಿದ್ದು, ಸ್ಪರ್ಧಿಸಿದ್ದ ಎಲ್ಲ ಸ್ಥಾನಗಳಲ್ಲಿ ಬಿಎಸ್‌ಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರ ವಿರುದ್ಧ ಕಠಿಣ ಕ್ರಮಕ್ಕೆ ಮಾಯಾವತಿ ಅವರು ಮುಂದಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.