ADVERTISEMENT

ಕೇರಳ ವಿಧಾನಸಭೆಯ ಸ್ಪೀಕರ್‌ ಆಗಿ ಎಂ.ಬಿ.ರಾಜೇಶ್ ಆಯ್ಕೆ

ಪಿಟಿಐ
Published 25 ಮೇ 2021, 10:31 IST
Last Updated 25 ಮೇ 2021, 10:31 IST
ಎಂ.ಬಿ.ರಾಜೇಶ್ (ಫೇಸ್‌ಬುಕ್‌ ಚಿತ್ರ)
ಎಂ.ಬಿ.ರಾಜೇಶ್ (ಫೇಸ್‌ಬುಕ್‌ ಚಿತ್ರ)   

ತಿರುವನಂತಪುರ: ಆಡಳಿತಾರೂಢ ಸಿಪಿಐ(ಎಂ)ನಎಂ.ಬಿ.ರಾಜೇಶ್ ಅವರು ಕೇರಳ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಮಂಗಳವಾರ ಆಯ್ಕೆಯಾದರು.

ನೂತನ ಸಭಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಯುಡಿಎಫ್‌ನಿಂದ ಸ್ಪರ್ಧಿಸಿದ್ದ ಪಿ.ವಿ.ವಿಷ್ಣುನಾಥ ಕೇವಲ 40 ಮತಗಳನ್ನು ಪಡೆದರೆ ರಾಜೇಶ್‌ 96 ಮತಗಳನ್ನು ಪಡೆದು ಜಯಗಳಿಸಿದರು.

ಮತದಾನದ ವೇಳೆ ಶಾಸಕರಾದ ಕೆ.ಬಾಬು, ಎಂ.ವಿನ್ಸೆಂಟ್ ಮತ್ತು ವಿ.ಅಬ್ದುರಹಿಮನ್‌ ಅನಾರೋಗ್ಯದ ಕಾರಣದಿಂದ ಗೈರು ಹಾಜರಾಗಿದ್ದರು. ಶಾಸಕ ಕನ್ನಮಂಗಲಮ್‌ ಹಂಗಾಮಿ ಸಭಾಧ್ಯಕ್ಷರ ಸ್ಥಾನದಲ್ಲಿ ಇದ್ದ ಕಾರಣ ಮತದಾನದಿಂದ ದೂರ ಉಳಿದಿದ್ದರು.

ADVERTISEMENT

ರಾಜೇಶ್‌ ಅವರು ರಾಜ್ಯ ವಿಧಾನಸಭೆಗೆ ಪ್ರವೇಶ ಪಡೆಯುವ ಮೊದಲು 10 ವರ್ಷ ಸಂಸತ್‌ ಸದಸ್ಯರಾಗಿದ್ದರು. ಸಿಪಿಐ (ಎಂ) ರಾಜ್ಯ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ನಂತರ ಮಾರ್ಕ್ಸಿಸ್ಟ್‌ ಪಕ್ಷದ ಯುವ ಘಟಕ ಡೆಮಾಕ್ರಟಿಕ್ ಯೂತ್ ಫೆಡರೇಷನ್‌ ಆಫ್‌ ಇಂಡಿಯಾದ (ಡಿವೈಎಫ್‌ಐ) ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.