ADVERTISEMENT

PM Modi foreign visits | ಮಾನ್‌ ಹೇಳಿಕೆ ವಿಷಾದನೀಯ: ವಿದೇಶಾಂಗ ಸಚಿವಾಲಯ

ಡೆಕ್ಕನ್ ಹೆರಾಲ್ಡ್
Published 11 ಜುಲೈ 2025, 2:54 IST
Last Updated 11 ಜುಲೈ 2025, 2:54 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಕೈಗೊಂಡಿದ್ದ ವಿದೇಶ ಪ್ರವಾಸದ ಕುರಿತು ಪಂಜಾಬ್ ಮುಖ್ಯಮಂತ್ರಿ ಭಗವಂತ್‌ ಮಾನ್ ಅವರು ನೀಡಿದ ಹೇಳಿಕೆಳನ್ನು ವಿದೇಶಾಂಗ ಸಚಿವಾಲಯ ಖಂಡಿಸಿದೆ. ಮಾನ್‌ ಅವರ ಅವರ ಹೇಳಿಕೆಗಳು ಬೇಜವಾಬ್ದಾರಿಯುತ ಹಾಗೂ ವಿಷಾದನೀಯ ಎಂದಿದೆ.

ಜಾಗತಿಕ ದಕ್ಷಿಣದ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧಗಳ ಬಗ್ಗೆ ಉನ್ನತ ರಾಜ್ಯ ಪ್ರಾಧಿಕಾರ ನೀಡಿದ ಕೆಲವು ಹೇಳಿಕೆಗಳನ್ನು ನಾವು ಕೇಳಿದ್ದೇವೆ. ಇಂತಹ ಹೇಳಿಕೆಗಳು ಬೇಜವಾಬ್ದಾರಿಯುತ ಹಾಗೂ ವಿಷಾದನೀಯ. ಇದು ರಾಜ್ಯ ಪ್ರಾಧಿಕಾರಕ್ಕೆ ಯೋಗ್ಯವಲ್ಲ ಎಂದು ವಿದೇಶಾಂಗ ವ್ಯವಹಾರಗಳ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

ಇಂತಹ ಅನಗತ್ಯ ಹೇಳಿಕೆಗಳು ಸ್ನೇಹಪರ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧವನ್ನು ಹಾಳುಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಜುಲೈ 2ರಿಂದ 9ರ ವರೆಗೆ ಪ್ರಧಾನಿ ಮೋದಿ ಅವರು ಘಾನಾ, ಟ್ರಿನಿಡಾಡ್ ಮತ್ತು ಟೊಬಾಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ದೇಶಗಳಿಗೆ ಪ್ರವಾಸ ಕೈಗೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಮಾನ್, ಪ್ರಧಾನಿ ಎಲ್ಲೋ ಹೋಗಿದ್ದಾರೆ. ಅದು ಘಾನಾ ಅಂತ ನನಗನ್ನಿಸುತ್ತದೆ. ಅವರು ಮತ್ತೆ ಬರಲಿದ್ದಾರೆ. ಅವರಿಗೆ ಸ್ವಾಗತ. ಅವರು ಯಾವ ದೇಶಗಳಿಗೆ ಭೇಟಿ ನೀಡುತ್ತಾರೋ ದೇವರೇ ಬಲ್ಲ. ಮ್ಯಾಗ್ನೇಷಿಯಾ, ಗಾಲ್ವೆಯಿಸಾ ಹಾಗೂ ಟರ್ವೆಸಿಯಾ ಎಂದು ಕರೆಯಲ್ಪಡುವ ಸ್ಥಳಗಳಿಗೆ ಅವರು ಭೇಟಿ ನೀಡುತ್ತಿರಬಹುದು ಎಂದು ತಮಾಷೆ ಮಾಡಿದ್ದರು.

ಪ್ರಧಾನಿ ಅವರು 140 ಕೋಟಿ ಜನರಿರುವ ದೇಶದಲ್ಲಿ ವಾಸಿಸುವುದಿಲ್ಲ. ಬದಲಿಗೆ 10,000 ಜನಸಂಖ್ಯೆ ಇರುವ ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಅವರಿಗೆ 'ಅತ್ಯುನ್ನತ ಪ್ರಶಸ್ತಿ'ಗಳು ಸಿಗುತ್ತಿವೆ. ಇಲ್ಲಿ, 10,000 ಜನರು ಜೆಸಿಬಿ ವೀಕ್ಷಿಸಲು ಸೇರುತ್ತಾರೆ ಎಂದು ಟೀಕಿಸಿದ್ದರು.

ಎಂಟು ದಿನಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರು ಘಾನಾ, ಟ್ರಿನಿಡಾಡ್ ಮತ್ತು ಟೊಬೆಗೊ, ಅರ್ಜೆಂಟೀನಾ, ಬ್ರೆಜಿಲ್ ಮತ್ತು ನಮೀಬಿಯಾ ಸೇರಿದಂತೆ ಐದು ದೇಶಗಳಿಗೆ ಭೇಟಿ ನೀಡಿದ್ದರು. ಈ ಪ್ರವಾಸದ ವೇಳೆ ಅವರಿಗೆ 4 ದೇಶಗಳ ಅತ್ಯುನ್ನತ ಗೌರವಗಳು ಲಭಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.