ADVERTISEMENT

ಎಂಆರ್‌ಐ, ಸಿಟಿ ಸ್ಕ್ಯಾನ್‌ ಶುಲ್ಕ ನಿಯಂತ್ರಣಕ್ಕೆ ಕ್ರಮ?

ವೈದ್ಯಕೀಯ ಯಂತ್ರಗಳು ಔಷಧ ವ್ಯಾಪ್ತಿಗೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2018, 19:51 IST
Last Updated 27 ಜೂನ್ 2018, 19:51 IST
ಎಂಆರ್‌ಐ ಸ್ಕ್ಯಾನ್‌
ಎಂಆರ್‌ಐ ಸ್ಕ್ಯಾನ್‌   

ನವದೆಹಲಿ: ಗುಣಮಟ್ಟದ ಮೇಲೆ ನಿಗಾ ಮತ್ತು ದುಬಾರಿ ಶುಲ್ಕ ನಿಯಂತ್ರಿಸಲು ಎಕ್ಸ್‌ರೇ, ಎಂಆರ್‌ಐ ಮತ್ತು ಸಿ.ಟಿ ಸ್ಕ್ಯಾನ್‌ನಂತಹ ಎಂಟು ಬಗೆಯ ವೈದ್ಯಕೀಯ ಯಂತ್ರೋಪಕರಣಗಳನ್ನು ‘ಔಷಧ’ಗಳ ವ್ಯಾಪ್ತಿಗೆ ತರಲುಕೇಂದ್ರ ಸರ್ಕಾರ ಮುಂದಾಗಿದೆ.

ಚಿತ್ರ ಸೆರೆ ಹಿಡಿಯುವ ಎಲ್ಲ ಬಗೆಯ ವೈದ್ಯಕೀಯ ಯಂತ್ರೋಪಕರಣ, ಹೃದಯದಲ್ಲಿ ಅಳವಡಿಸುವ ಪೇಸ್‌ ಮೇಕರ್‌, ಡಯಾಲಿಸಿಸ್‌ ಯಂತ್ರಗಳನ್ನು ಔಷಧಗಳ ಪಟ್ಟಿಗೆ ಸೇರಿಸುವ ಪ್ರಸ್ತಾಪವನ್ನು ಕೇಂದ್ರ ಔಷಧ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆ ಮುಂದಿಟ್ಟಿದೆ.

ಆಸ್ಪತ್ರೆಗಳು ಮತ್ತು ರೋಗಪತ್ತೆ ವೈದ್ಯಕೀಯ ಕೇಂದ್ರಗಳು ಬೇಕಾಬಿಟ್ಟಿಯಾಗಿ ರೋಗಿಗಳಿಂದ ಹಣ ಸುಲಿಯುವ ಪ್ರವೃತ್ತಿಗೆ ಭವಿಷ್ಯದಲ್ಲಿ ಕಡಿವಾಣ ಬೀಳಬಹುದು ಎಂದು ನಿರೀಕ್ಷಿಸಲಾಗಿದೆ.

ADVERTISEMENT

ಹೃದಯದಲ್ಲಿ ಅಳವಡಿಸುವ ಸ್ಟೆಂಟ್‌ ಮತ್ತು ಕೃತಕ ಮಂಡಿಚಿಪ್ಪುಗಳ ಗರಿಷ್ಠ ಮಾರಾಟ ಬೆಲೆ ಮಿತಿ ನಿಗದಿಗೊಳಿಸಿದ ನಂತರ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರ ಇದಾಗಿದೆ.

ಈ ಸಂಬಂಧ ಕೇಂದ್ರ ಔಷಧ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆ ಕಳೆದ ಶುಕ್ರವಾರ ‘ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ–1940’ ಅಡಿ ಸುತ್ತೋಲೆ ಹೊರಡಿಸಿದ್ದು, ಸಾರ್ವಜನಿಕರಿಂದ ಸಲಹೆ, ಸೂಚನೆ ಆಹ್ವಾನಿಸಿದೆ.

ದುಬಾರಿ ವೈದ್ಯಕೀಯ ಸಾಧನಗಳು ‘ಔಷಧಗಳ ಪಟ್ಟಿ’ಗೆ ಸೇರಿದರೆ ಅವುಗಳ ಬೆಲೆ ಮತ್ತು ಗುಣಮಟ್ಟಗಳ ಮೇಲೆ ಔಷಧ ಮತ್ತು ಗುಣಮಟ್ಟ ನಿಯಂತ್ರಣ ಸಂಸ್ಥೆಗೆ ಹಿಡಿತ ದೊರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.