ADVERTISEMENT

ಆಸ್ಪತ್ರೆಯ ಬಳಿ ವೈದ್ಯಕೀಯ ವಿದ್ಯಾರ್ಥಿಗಳಿಂದ ಜೋರಾದ ಸಂಗೀತ, ನೃತ್ಯ:ತನಿಖೆಗೆ ಆದೇಶ

ಪಿಟಿಐ
Published 17 ಮಾರ್ಚ್ 2025, 10:11 IST
Last Updated 17 ಮಾರ್ಚ್ 2025, 10:11 IST
<div class="paragraphs"><p><a href="https://x.com/AcharyaJay22_17">@AcharyaJay22_17</a></p></div>

ಗಾಂಧಿನಗರ: ಗುಜರಾತ್‌ನ ವಲ್ಸಾದ್‌ ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಜೋರಾದ ಸಂಗೀತದೊಂದಿಗೆ ವೈದ್ಯಕೀಯ ವಿದ್ಯಾರ್ಥಿಗಳು ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಆಚರಿಸಿದ್ದಾರೆ ಎನ್ನಲಾದ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ಜಿಎಂಇಆರ್‌ಎಸ್‌ನ (ಗುಜರಾತ್‌ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸೊಸೈಟಿ) ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆವರಣದಲ್ಲಿ ಕೆಲವು ವಿದ್ಯಾರ್ಥಿಗಳು ಕಾರುಗಳಿಂದ ಜಿಗಿಯುವ ಮೂಲಕ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದರು. ಜತೆಗೆ ಜೋರಾಗಿ ಹಾಡು ಹಾಕಿಕೊಂಡು ನೃತ್ಯ ಮಾಡುವ ಮೂಲಕ ರೋಗಿಗಳು ಮತ್ತು ಸ್ಥಳೀಯರಿಗೆ ಅನಾನುಕೂಲ ಉಂಟು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ADVERTISEMENT

ಈ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಜಿಎಂಇಆರ್‌ಎಸ್‌ನ ಡೀನ್ ಡಾ. ಕಮಲೇಶ್ ಶಾ, ಆಸ್ಪತ್ರೆಯ ಬಳಿಯ ಫುಟ್ಬಾಲ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿತ್ತು. ಆದರೆ ಅವರು ನಿಯಮವನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ವರದಿ ಬಳಿಕ ಕ್ರಮಕೈಗೊಳ್ಳಲಾಗುವುದು ಎಂದು ಕಮಲೇಶ್ ಹೇಳಿದ್ದಾರೆ.

ಆಸ್ಪತ್ರೆಯ ಬಳಿ ವಿದ್ಯಾರ್ಥಿಗಳು ಜೋರಾದ ಡಿಜೆ ಹಾಡುಗಳಿಗೆ ನೃತ್ಯ ಮಾಡುತ್ತಿರುವುದು ಹಾಗೂ ಕಾರಿನ ಮೇಲಿಂದ ಸಾಹಸಮಯ ಪ್ರದರ್ಶನ ಮಾಡುತ್ತಿರುವ ದೃಶ್ಯಗಳು ವಿಡಿಯೊದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.