
ಮೆಹಬೂಬಾ ಮುಫ್ತಿ
ಶ್ರೀನಗರ: ಬಿಜೆಪಿ ನಾಯಕರದ್ದು ದ್ವಂದ್ವ ನೀತಿ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ವರಿಷ್ಠರಾದ ಮೆಹಬೂಬಾ ಮುಫ್ತಿ ಅವರು ಹರಿಹಾಯ್ದಿದ್ದಾರೆ.
‘ಮಧ್ಯಪ್ರಾಚ್ಯದ ಶೇಖ್‌ಗಳಿಗೆ ಕೆಂಪು ರತ್ನಗಂಬಳಿ ಹಾಸುವ ಕೇಸರಿ ಕಲಿಗಳು, ನಮ್ಮ ನೆಲದ ಸೂಫಿ ಸಂತ, ಕವಿ ಬಾಬಾ ಬುಲ್ಲೇಶಾ ಅವರ ದೇಗುಲ ನಾಶವನ್ನು ಸಂತೋಷದಿಂದ ಕಣ್ತುಂಬಿಕೊಳ್ಳುತ್ತಾರೆ’ ಎಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಕಿಡಿಕಾರಿದ್ದಾರೆ.
ಬಿಜೆಪಿಯು ಉದ್ದೇಶಪೂರ್ವಕವಾಗಿ ದ್ವಂದ್ವ ನೀತಿ ಅಳವಡಿಸಿಕೊಂಡಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿಯೂ ಆದ ಮುಫ್ತಿ ದೂರಿದ್ದಾರೆ.
‘ಈ ಕಪಟತೆಯು ಆಕಸ್ಮಿಕವಲ್ಲ. ಉದ್ದೇಶಪೂರ್ವಕವಾದದ್ದು. ಹೆಚ್ಚುತ್ತಿರುವ ಬಡತನ, ಸಾಮೂಹಿಕ ನಿರುದ್ಯೋಗ, ಯುವ ಪೀಳಿಗೆಯ ಭವಿಷ್ಯದ ಬಗ್ಗೆ ಉತ್ತರಿಸುವುದಕ್ಕಿಂತ ಸಾಮರಸ್ಯ ಹಾಳುಮಾಡುವುದು ಸುಲಭದ ಕೆಲಸವಾಗಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಮಸ್ಸೂರಿಯಲ್ಲಿರುವ ಬಾಬಾ ಬುಲ್ಲೇಶಾ ಅವರ ದೇಗುಲವನ್ನು ಜ.24ರಂದು ಧ್ವಂಸಗೊಳಿಸಿರುವುದಕ್ಕೆ ಮೆಹಬೂಬಾ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.