ADVERTISEMENT

Mehrauli Murder | ಅಫ್ತಾಬ್‌ನ ಕ್ರೌರ್ಯದ ಮುಖಗಳು ಅನಾವರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ನವೆಂಬರ್ 2022, 11:30 IST
Last Updated 26 ನವೆಂಬರ್ 2022, 11:30 IST
ಪೊಲೀಸ್‌ ವಶದಲ್ಲಿ ಅಫ್ತಾಬ್ (ಪಿಟಿಐ ಚಿತ್ರ)
ಪೊಲೀಸ್‌ ವಶದಲ್ಲಿ ಅಫ್ತಾಬ್ (ಪಿಟಿಐ ಚಿತ್ರ)   

ನವದೆಹಲಿ: ಇಡೀ ದೇಶವನ್ನು ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್‌ ಭೀಕರ ಕೊಲೆ ಪ್ರಕರ‌ಣದ ತನಿಖೆಯಿಂದ ಬೆಚ್ಚಿ ಬೀಳಿಸುವ ಸಂಗತಿಗಳು ಹೊರ ಬರುತ್ತಿದೆ. ಅಫ್ತಾಬ್‌ನ ಕ್ರೌರ್ಯದ ಮುಖಗಳು ಅನಾವರಣಗೊಳ್ಳುತ್ತಿದೆ.

ಮೇ 18ರಂದು ದಕ್ಷಿಣ ದೆಹಲಿಯ ಮೆಹ್ರೌಲಿಯಲ್ಲಿ ಅಫ್ತಾಬ್‌ ಪ್ರೇಯಸಿ ಶ್ರದ್ಧಾಳ ಕತ್ತುಸೀಳಿ ಕೊಂದಿದ್ದ. ಬಳಿಕ ಆಕೆಯ ದೇಹವನ್ನು ಸುಮಾರು 35 ಭಾಗಗಳಾಗಿ ಕತ್ತರಿಸಿ ಮೂರು ವಾರಗಳ ಕಾಲ ಫ್ರಿಡ್ಜ್‌ನಲ್ಲಿಟ್ಟು, ನಗರದಾದ್ಯಂತ ಹಲವು ದಿನಗಳ ಕಾಲ ಎಸೆದಿದ್ದ.

ಅಫ್ತಾಬ್‌ನ ಕ್ರೌರ್ಯದ ಮುಖಗಳು

ADVERTISEMENT

1. ಶ್ರದ್ಧಾಳನ್ನು ಕೊಲೆ ಮಾಡಿದ ಬಳಿಕ, ಆಕೆಯ ದೇಹವನ್ನು ತುಂಡು ತುಂಡು ಮಾಡಿದ್ದ. ದೇಹದಿಂದ ರಕ್ತವನ್ನೆಲ್ಲಾ ತೆಗೆದು, ದೇಹಕ್ಕೆ ಆ್ಯಸಿಡ್‌ ಹಾಗೂ ಕೀಟನಾಶಕ ಸಿಂಪಡಿಸಿ ಕೆಡದಂತೆ ಫ್ರಿಡ್ಜ್‌ನಲ್ಲಿ ಇರಿಸಿದ್ದ.

2. ಕೊಲೆ ಮಾಡಿದ ಅಫ್ತಾಬ್‌ ಹೆಚ್ಚಾಗಿ ಮನೆಯೊಳಗೇ ಇರುತ್ತಿದ್ದ. ಆಹಾರವನ್ನು ಆ‌ರ್ಡರ್‌ ಮಾಡಿ ತರಿಸಿಕೊಳ್ಳುತ್ತಿದ್ದ. ಶ್ರದ್ಧಾಳನ್ನು ಕೊಲೆ ಮಾಡ ಇರಿಸಿದ್ದ ಅದೇ ಫ್ರಿಡ್ಜ್‌ನಲ್ಲಿ ಆಹಾರವನ್ನೂ ಇಡುತ್ತಿದ್ದ.

3. ಶ್ರದ್ಧಾಳನ್ನು ಕೊಲೆ ಮಾಡಿದ ಕೆಲ ದಿನಗಳ ಬಳಿಕ, ಡೇಟಿಂಗ್‌ ಆ್ಯಪ್‌ ಮೂಲಕ ಬೇರೆ ಹುಡುಗಿಯರನ್ನು ಪರಿಚಯ ಮಾಡಿಕೊಂಡಿದ್ದ. ಶವ ಫ್ರಿಡ್ಜ್‌ನಲ್ಲಿ ಇರುವಾ‌ಗಲೇ ಬೇರೆ ಪ್ರೇಯಸಿಯನ್ನು ಮನೆಗೆ ಕರೆ ತಂದಿದ್ದ.

4. ಶ್ರದ್ಧಾಳ ದೇಹವನ್ನು ಇರಿಸಿದ್ದ ಅದೇ ಕೋಣೆಯಲ್ಲಿ ಅಫ್ತಾಬ್‌ ಮಲಗುತ್ತಿದ್ದ. ಆಗಾಗ ಫ್ರಿಡ್ಜ್‌ನ ಬಾಗಿಲು ತೆಗೆದು ಶ್ರದ್ಧಾಳ ಮುಖ ನೋಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

5. ಅಫ್ತಾಬ್‌, ಕ್ರೈ ಥ್ರಿಲ್ಲರ್‌ ಸಿನಿಮಾಗಳನ್ನು ಹೆಚ್ಚಾಗಿ ನೋಡುತ್ತಿದ್ದ. ‘ಡೆಕ್ಸ್ಟರ್‌‘ ಎನ್ನುವ ಅಮೆರಿಕನ್‌ ಸಿರಿಸ್‌ನಿಂದ ಪ್ರಭಾವಿತನಾಗಿ ಈ ಕೃತ್ಯ ಎಸಗಿದ್ದ ಎನ್ನುವುದು ಪೊಲೀಸರು ನೀಡಿದ ಮಾಹಿತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.