ADVERTISEMENT

ನರೇಂದ್ರ ಮೋದಿ ಬಗ್ಗೆ ಪಿಎಚ್‍ಡಿ ಪ್ರಬಂಧ ಮಂಡಿಸಿದ ಮೆಹುಲ್ ಚೋಕ್ಸಿ! 

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2019, 13:39 IST
Last Updated 18 ಮಾರ್ಚ್ 2019, 13:39 IST
   

ಸೂರತ್ : ಪ್ರಧಾನಿನರೇಂದ್ರ ದಾಮೋದರ್ ಮೋದಿ ಬಗ್ಗೆ ಮೆಹುಲ್ ಚೋಕ್ಸಿ ಪಿಎಚ್‍ಡಿ ಪ್ರಬಂಧ ಮಂಡಿಸಿದ್ದಾರೆ.ಮೆಹುಲ್ ಚೋಕ್ಸಿ? ಗಾಬರಿಯಾಗಬೇಡಿ.ನೀರವ್ ಮೋದಿ ಜತೆ ಸೇರಿ ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ ₹13ಸಾವಿರಕೋಟಿಗಿಂತಲೂ ಹೆಚ್ಚು ವಂಚನೆ ನಡೆಸಿದ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಅಲ್ಲ.ಇದು ಸೂರತ್‍‍ನ ವೀರ್ ನರ್ಮದಾ ಸೌತ್ ಗುಜರಾತ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಮೆಹುಲ್ ಚೋಕ್ಸಿ.

ಪೊಲಿಟಿಕಲ್ ಸಯನ್ಸ್ ಪದವೀಧರ, ವಕೀಲರೂ ಆಗಿರುವ ಚೋಕ್ಸಿ Leadership Under Government: Case study of Narendra Modi ಎಂಬ ವಿಷಯದಲ್ಲಿ ಪ್ರಬಂಧ ಮಂಡನೆ ಮಾಡಿದ್ದಾರೆ.ಇದಕ್ಕಾಗಿ ಅವರು ಸುಮಾರು 450 ಮಂದಿಯನ್ನು ಸಮೀಕ್ಷೆಗೊಳಪಡಿಸಿದ್ದಾರೆ ಎಂದು ಎಎನ್‍ಐ ವರದಿ ಮಾಡಿದೆ.

ವಿದ್ಯಾರ್ಥಿಗಳು, ಶಿಕ್ಷಕರು, ರೈತರು, ಸರ್ಕಾರಿ ಮತ್ತು ಇತರ ನೌಕರರಲ್ಲಿ 32 ಪ್ರಶ್ನೆಗಳನ್ನು ಕೇಳಿ ಆ ಉತ್ತರಗಳನ್ನು ಆಧರಿಸಿಈ ಪ್ರಬಂಧ ಬರೆಯಲಾಗಿದೆ.

ADVERTISEMENT

ಈ ಪ್ರಶ್ನೆಗಳಿಗೆ ಉತ್ತರಿಸಿದವರರಲ್ಲಿ ಶೇ.81 ಮಂದಿ ಪ್ರಧಾನಿಯವರಲ್ಲಿ ಪಾಸಿಟಿವ್ ನಾಯಕತ್ವ ಗುಣ ಅತ್ಯಗತ್ಯ ಎಂದು ಅಭಿಪ್ರಾಯಪಟ್ಟರೆ ಶೇ.34 ಜನರು ಪಾರದರ್ಶಕತೆ ಮತ್ತು ಶೇ.31 ಮಂದಿ ವಿಶ್ವಾಸಾರ್ಹತೆ ಮುಖ್ಯ ಎಂದಿದ್ದಾರೆ.

ಮೋದಿ ಬಗ್ಗೆ ಅಭಿಪ್ರಾಯ ಕೇಳಿದಾಗ ಶೇ.48 ಮಂದಿ ಮೋದಿಯ ರಾಜಕೀಯ ಗುಣ ಉತ್ತಮ ಎಂದಿದ್ದಾರೆ.ಶೇ.25 ಮಂದಿ ಮೋದಿಯವರ ಭಾಷಣ ಇತರರಿಗಿಂತ ಉತ್ತಮ ಎಂದಿದ್ದಾರೆ.

ವರದಿ ಪ್ರಕಾರ, ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಅಂದರೆ 2010ರಲ್ಲಿಯೇ ಚೋಕ್ಸಿ ಪಿಎಚ್‍ಡಿ ಪ್ರಬಂಧ ಬರೆಯಲು ಆರಂಭಿಸಿದ್ದರು. ಒಂಭತ್ತು ವರ್ಷಗಳ ನಂತರ ಅವರ ಪಿಎಚ್‍ಡಿ ಪ್ರಬಂಧ ಮಂಡನೆಯಾಗಿದೆ.

ಮೆಹುಲ್ ಚೋಕ್ಸಿ ಮೋದಿ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ ಎಂಬ ಸುದ್ದಿ ಪ್ರಕಟವಾಗುತ್ತಿದ್ದಂತೆ ಟ್ವೀಟಿಗರು ತಮಾಷೆಯ ಟ್ವೀಟ್‍ಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.