ADVERTISEMENT

ಭಾರತೀಯ ಸೇನೆಯ ಬೆನ್ನೆಲುಬಾಗಿದ್ದ MiG-21 ವಿಮಾನಕ್ಕೆ ಸೆ.26ರಂದು ಬೀಳ್ಕೊಡುಗೆ

ಪಿಟಿಐ
Published 24 ಸೆಪ್ಟೆಂಬರ್ 2025, 13:43 IST
Last Updated 24 ಸೆಪ್ಟೆಂಬರ್ 2025, 13:43 IST
   

ಚಂಡೀಗಢ: ಭಾರತದ ಕೀರ್ತಿಯನ್ನು ಬಾನೆತ್ತರದಲ್ಲಿ ಹಾರಿಸಿದ, ದೇಶದ ವಾಯುಸೇನೆಯ ಸಾಮರ್ಥ್ಯವನ್ನು ಜಗತ್ತಿಗೆ ಸಾರಿದ ರಷ್ಯಾ ನಿರ್ಮಿತ ಮಿಗ್–21 ಯುದ್ಧ ವಿಮಾನವು ಇದೇ 26ರಿಂದ ನಿವೃತ್ತಿ ಪಡೆಯಲಿದೆ.

ಚಂಡೀಗಢದ ವಾಯುನೆಲೆಯಲ್ಲಿ 23 ಸ್ಕ್ವಾಡ್ರನ್‌ಗೆ ಸೇರಿದ ‘ಪ್ಯಾಂಥರ್ಸ್‌’ ಹೆಸರಿನ ಮಿಗ್‌–21 ಯುದ್ಧ ವಿಮಾನಕ್ಕೆ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ ಸಿಂಗ್‌, ಸೇನಾಪಡೆಗಳ ಮುಖ್ಯಸ್ಥ (ಸಿಡಿಎಸ್‌) ಅನಿಲ್‌ ಚೌಹಾಣ್‌, ಸೇನೆಯ ಮುಖ್ಯಸ್ಥ ಜನರಲ್‌ ಉಪೇಂದ್ರ ದ್ವಿವೇದಿ, ಏರ್‌ ಚೀಫ್‌ ಮಾರ್ಷಲ್ ಎ.ಪಿ.ಸಿಂಗ್‌, ನೌಕಾಪಡೆಯ ಮುಖಸ್ಥ ಅಡ್ಮಿರಲ್‌ ದಿನೇಶ್‌ ಕೆ.ತ್ರಿಪಾಠಿ ಮತ್ತಿತರರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ADVERTISEMENT

ಕಾರ್ಯಕ್ರಮದ ಅಂಗವಾಗಿ ಭಾರತೀಯ ವಾಯುಪಡೆಯ ವಾಯುನೆಲೆಯಲ್ಲಿ ಬುಧವಾರ ಸಮವಸ್ತ್ರ ಧರಿಸಿ ತಾಲೀಮು ನಡೆಸಲಾಯಿತು.

ಆರು ದಶಕ ಭಾರತೀಯ ಸೇನೆಯ ಬೆನ್ನೆಲುಬಾಗಿದ್ದ ಮಿಗ್‌–21 ಯುದ್ಧ ವಿಮಾನಗಳು ಪಾಕಿಸ್ತಾನದೊಂದಿಗಿನ 1965 ಮತ್ತು 1971ರ ಯುದ್ಧದಲ್ಲಿ ಹಾಗೂ 1999ರ ಕಾರ್ಗಿಲ್‌ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದವು. 2019ರ ಬಾಲಾಕೋಟ್‌ ವಾಯುದಾಳಿಯಲ್ಲಿಯೂ ಮಹತ್ವದ ಮಾತ್ರ ವಹಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.