ADVERTISEMENT

ಕುಪ್ವಾರ ಎನ್‌ಕೌಂಟರ್‌: ಪಾಕಿಸ್ತಾನಿ ಉಗ್ರನ ಹತ್ಯೆ

ಪಿಟಿಐ
Published 20 ಆಗಸ್ಟ್ 2020, 7:20 IST
Last Updated 20 ಆಗಸ್ಟ್ 2020, 7:20 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಬುಧವಾರ ನಡೆದ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲಾದ ಉಗ್ರ ಪಾಕಿಸ್ತಾನಕ್ಕೆ ಸೇರಿದ ಉಗ್ರ. ಈತನನ್ನು ಡ್ಯಾನಿಶ್‌ ಎಂದು ಗುರುತಿಸಲಾಗಿದೆ.

‘ಎನ್‌ಕೌಂಟರ್‌ನಲ್ಲಿ ಎಲ್‌ಇಟಿ ಕಮಾಂಡರ್‌ ನಸೀರ್‌ ಉದ್ದೀನ್ ಲೋನ್‌ ಮತ್ತು ಪಾಕಿಸ್ತಾನಿ ಉಗ್ರ ಡ್ಯಾನಿಶ್‌‌ನನ್ನು ಹೊಡೆದುರುಳಿಸಲಾಗಿದೆ’ ಎಂದುಕಾಶ್ಮೀರದ ಐಜಿಪಿ ವಿಜಯ್‌ ಕುಮಾರ್ ಗುರುವಾರ ತಿಳಿಸಿದರು.

‘ಏ.18ರಂದುಸೊಪೋರದಲ್ಲಿಮೂರು ಸಿಆರ್‌ಪಿಎಫ್ ಯೋಧರನ್ನು ಮತ್ತು ಮೇ 4 ರಂದು ಹಂದ್ವಾರ‌ದಲ್ಲಿ ಮೂವರು ಯೋಧರನ್ನು ಹತ್ಯೆಗೈದ ಪ್ರಕರಣದಲ್ಲಿ ನಸೀರ್‌ ಉದ್ದೀನ್ ಭಾಗಿಯಾಗಿದ್ದ’ ಎಂದು ‌ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.