
ಪಿಟಿಐ
ನವದೆಹಲಿ: ಯುದ್ಧ ನೀತಿ, ಸೇನಾ ಕಾರ್ಯಾಚರಣೆಗಳಲ್ಲಿನ ಬೆಳವಣಿಗೆಗಳು ಸೇರಿದಂತೆ ಸುಧಾರಿತ ಪಠ್ಯಕ್ರಮವನ್ನು ಹೊಂದಿರುವ ಸೇನೆಯ ಮೂರು ವಿಭಾಗಗಳ ‘ಭವಿಷ್ಯದ ಯುದ್ಧನೀತಿ’ ಕೋರ್ಸ್‌ನ ಮೂರನೇ ಆವೃತ್ತಿಯು ಸೋಮವಾರ ಆರಂಭಗೊಂಡಿದ್ದು, ಫೆಬ್ರುವರಿ 25ವರೆಗೆ ನಡೆಯಲಿದೆ.
ಸೇನಾ ಸಿಬ್ಬಂದಿ ವಿಭಾಗದ ಪ್ರಧಾನ ಕಚೇರಿ ಮತ್ತು ಜಂಟಿ ಯುದ್ಧನೀತಿ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ದೆಹಲಿಯ ಮಾಣೆಕ್ ಶಾ ಕೇಂದ್ರದಲ್ಲಿ ಕಾರ್ಯಾಗಾರ ನಡೆಯುತ್ತಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ಸೇನೆಯ ಮೂರು ವಿಭಾಗಗಳ ಸಿಬ್ಬಂದಿ ಮತ್ತು ರಕ್ಷಣಾ ವಲಯಕ್ಕೆ ಸಂಬಂಧಿಸಿದ ಸರ್ಕಾರಿ ಮತ್ತು ಖಾಸಗಿ ಉದ್ಯಮಗಳ ಪ್ರತಿನಿಧಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.