ADVERTISEMENT

ಮಹಾರಾಣಾ ಜೈಸಿಂಗ್ ಆಸ್ಥಾನ ಕಲಾವಿದ ಅಲ್ಲಾ ಬಕ್ಷ್ ಕೈಚಳಕದಲ್ಲಿ ಮಹಾಭಾರತ

ಪಿಟಿಐ
Published 13 ಸೆಪ್ಟೆಂಬರ್ 2023, 13:51 IST
Last Updated 13 ಸೆಪ್ಟೆಂಬರ್ 2023, 13:51 IST

ನವದೆಹಲಿ: ರಾಜಸ್ಥಾನದ ಉದಯಪುರದ ಮಹಾರಾಣಾ ಜೈಸಿಂಗ್ ಅವರ ಆಸ್ಥಾನ ವರ್ಣ ಚಿತ್ರಕಾರ ಅಲ್ಲಾ ಬಕ್ಷ್ ಅವರ ರಚನೆಯ ಚಿಕಣಿ ಚಿತ್ರಗಳುಳ್ಳ ನಾಲ್ಕು ಸಂಪುಟಗಳ ಪುಸ್ತಕಗಳು ಮಹಾಭಾರತದ ದೃಶ್ಯಗಳನ್ನು ಪುನರ್ ನಿರ್ಮಾಣ ಮಾಡಿವೆ. 

1680ರಿಂದ 1698ರ ಅವಧಿಯಲ್ಲಿ ರಚಿತವಾಗಿರುವ ‘ದ ಮಹಾಭಾರತ: ಮೇವಾಡ್‌ ಮಿನಿಯೇಚರ್ ಪೇಂಟಿಂಗ್ಸ್’ ಸಂಪುಟಗಳನ್ನು ಚಂದ್ರಪ್ರಕಾಶ್ ದೇವಲ್ ಮತ್ತು ಅಲೋಕ್ ಬಲ್ಲಾ ಪ್ರಕಟಿಸಿದ್ದಾರೆ. 

ವರ್ಣಚಿತ್ರಗಳ ಅಂದವನ್ನು ಚಿನ್ನಲೇಪಿತ ಪುಟಗಳು ಮತ್ತು ಅನುವಾದಗಳಿಂದ ಹೆಚ್ಚಿಸಲಾಗಿದೆ. ಪ್ರತೀ ವರ್ಣಚಿತ್ರದ ಜತೆಗೆ ಮಹಾಭಾರತದ ಪದ್ಯವೊಂದನ್ನು ಪಂಡಿತ್ ಕಿಶನ್ ದಾಸ್ ಅವರು ಬರೆದ ಮೇವಾಡ ಭಾಷೆಯಲ್ಲಿ ಬರೆದಿದ್ದಾರೆ. ಇದನ್ನು ದೇವಲ್ ಅವರು ಹಿಂದಿಗೆ ಹಾಗೂ ಬಲ್ಲಾ ಅವರು ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಇದರ ಜತೆಗೆ ಪುಸ್ತಕದಲ್ಲಿ ಮಹಾಭಾರತದ 14 ಪರ್ವಗಳ ಪರಿಚಯವನ್ನೂ ಮಾಡಿಕೊಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.