ADVERTISEMENT

ಧರ್ಮೇಂದ್ರ ಪ್ರಧಾನ್ ಹೆಲಿಕಾಪ್ಟರ್‌ನಲ್ಲಿ ಸೂಟ್‌ಕೇಸ್ ಪತ್ತೆ, ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2019, 11:03 IST
Last Updated 18 ಏಪ್ರಿಲ್ 2019, 11:03 IST
   

ಭುವನೇಶ್ವರ್: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹೆಲಿಕಾಪ್ಟರ್‌ನಲ್ಲಿ ಸೂಟ್‍ಕೇಸ್‌ ಪತ್ತೆಯಾಗಿದ್ದು, ಹೆಲಿಕಾಪ್ಟರ್ ತಪಾಸಣೆ ಮಾಡಲು ಯತ್ನಿಸಿದ ಒಡಿಶಾದ ಸರ್ಕಾರಿ ಅಧಿಕಾರಿ ಜತೆ ಸಚಿವರುಅನುಚಿತವಾಗಿ ವರ್ತಿಸಿದ್ದಾರೆಎಂದು ಎನ್‍ಡಿಟಿವಿ ವರದಿ ಮಾಡಿದೆ.

ಪೆಟ್ರೊಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಆಡಳಿತರೂಢ ಬಿಜು ಜನತಾ ದಳ (ಬಿಜೆಡಿ) ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದೆ.

ಬಿಜೆಪಿ ನೇತಾರ ಧರ್ಮೇಂದ್ರ ಪ್ರಧಾನ್ ಅವರ ಹೆಲಿಕಾಪ್ಟರ್‌ನಲ್ಲಿ ಸೂಟ್‍ಕೇಸ್ ಪತ್ತೆಯಾಗಿದೆ. ಇದನ್ನು ತಪಾಸಣೆ ಮಾಡುವ ವೇಳೆ ಪ್ರಧಾನ್ ಸರ್ಕಾರಿ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿ, ತಪಾಸಣೆ ಮಾಡದಂತೆ ತಡೆಯೊಡ್ಡಿದ್ದಾರೆ.ಈ ದೃಶ್ಯಗಳು ಬಹುತೇಕ ಸುದ್ದಿವಾಹಿನಿಗಳಲ್ಲಿ ಮಂಗಳವಾರ ಪ್ರಸಾರವಾಗಿದೆ., ಚುನಾವಣಾ ಕರ್ತವ್ಯದ ಭಾಗವಾಗಿಯೇ ಈ ತಪಾಸಣೆ ನಡೆದಿದೆ ಎಂದು ಬಿಜೆಡಿ ಸಲ್ಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಈ ಸೂಟ್‌ಕೇಸ್‌ನಲ್ಲಿ ನಗದು ಇದೆ ಎಂದು ಶಂಕಿಸಲಾಗಿದ್ದು, ಈ ಸೂಟ್‌ಕೇಸ್‌ನಲ್ಲಿ ಏನಿದೆ ಎಂಬುದರ ಬಗ್ಗೆ ನಮಗೆ ತಿಳಿಯಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.