ADVERTISEMENT

ಉತ್ತರ ಪ್ರದೇಶ: ಅತ್ಯಾಚಾರ ಆರೋಪದಡಿ ಬಾಲಕನ ಬಂಧನ

ಪಿಟಿಐ
Published 20 ಡಿಸೆಂಬರ್ 2020, 5:15 IST
Last Updated 20 ಡಿಸೆಂಬರ್ 2020, 5:15 IST
ಅತ್ಯಾಚಾರ ಸಂತ್ರಸ್ತೆ–ಪ್ರಾತಿನಿಧಿಕ ಚಿತ್ರ
ಅತ್ಯಾಚಾರ ಸಂತ್ರಸ್ತೆ–ಪ್ರಾತಿನಿಧಿಕ ಚಿತ್ರ   

ಹಮಿರ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ತನ್ನ ಐದು ವರ್ಷದ ಸೋದರ ಸೊಸೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಬಾಲಕನನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.

‘ಶನಿವಾರ ಮಧ್ಯಾಹ್ನ ಬಾಲಕಿಯ ಮನೆಯಲ್ಲಿ ಆಟವಾಡುತ್ತಿದ್ದಾಗ 16 ವರ್ಷದ ಸಂಬಂಧಿ ಆಕೆಗೆ ಬಿಸ್ಕತ್‌ನ ಆಸೆ ನೀಡಿ, ತನ್ನ ಮನೆಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ. ಈ ಘಟನೆ ಬಳಿಕ ಬಾಲಕಿ ಅತ್ತುಕೊಂಡು ಮನೆಗೆ ಮರಳಿದ್ದಾಳೆ. ನಂತರ ನಡೆದ ವಿಷಯವನ್ನು ತಾಯಿಗೆ ತಿಳಿಸಿದ್ದಾಳೆ’ ಎಂದು ವರಿಷ್ಠಾಧಿಕಾರಿ ನರೇಂದ್ರ ಕುಮಾರ್‌ ಸಿಂಗ್‌ ಅವರು ಮಾಹಿತಿ ನೀಡಿದರು.

ಸಂತ್ರಸ್ತೆಯ ಪೋಷಕರು ನೀಡಿದ ದೂರಿನ ಮೇರೆಗೆ ಆರೋಪಿಯ ವಿರುದ್ದ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.